ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 46 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ, ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧರಿಸಿದ್ದಾರೆ.
ನೆಚ್ಚಿನ ನಟನ ಹುಟ್ಟುಹಬ್ಬದ ಕ್ಷಣ ನೋಡಲು ಜೆ.ಪಿ.ನಗರದ ಮನೆ ಬಳಿ ಸಾವಿರಾರು ಜನ ಸಾಕ್ಷಿಯಾಗಿದ್ದರು. ಮಧ್ಯರಾತ್ರಿ 12.15 ಕ್ಕೆ ಖುದ್ದು ಸುದೀಪ್ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿದರು. ಈ ಕ್ಷಣಕ್ಕೆ ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತ್ತು. “ಕಿಚ್ಚ ಸುದೀಪ್‍ಗೆ ಜೈ, ಕರ್ನಾಟಕದ ಪೈಲ್ವಾನ್‍ಗೆ ಜೈ, ಪರಭಾಷೆಗಳ ವಿಲನ್‍ಗೆ ಜೈ” ಎಂದು ಅಭಿನಯ ಚಕ್ರವರ್ತಿಗೆ ಜೈಕಾರದ ಹಾಕುತ್ತಾ ಅಭಿಮಾನಿಗಳ ನೃತ್ಯ ಸಂಭ್ರಮ ಸಖತ್ತಾಗಿತ್ತು.
ಇದೇ ವೇಳೆ ಪೈಲ್ವಾನ್ ಚಿತ್ರತಂಡ ಒಂದು ಹಾಡನ್ನು ರಿಲೀಸ್ ಮಾಡಿ ಸುದೀಪ್‍ಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದೆ. ಪೈಲ್ವಾನ್ ಚಿತ್ರ ಸೆಪ್ಟೆಂಬರ್ 12ಕ್ಕೆ ದೇಶಾದ್ಯಂತ ರಿಲೀಸ್ ಆಗಲಿದ್ದು, ದೇಶದೆಲ್ಲೆಡೆ ಪೈಲ್ವಾನ್ 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸುದೀಪ್ ಪಾಲಿಗೆ ಪೈಲ್ವಾನ್ ಚಿತ್ರ ರಿಲೀಸ್ ಆಗಿ ಗೆದ್ದು, ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ.