ವಾಷಿಂಗ್ಟನ್: ಮೊಸಳೆ ಎದುರಲ್ಲೇ ಹೋಗುತ್ತಿದ್ದರೂ ಸ್ಪಲ್ಪವೂ ಭಯಪಡದೆ, ವ್ಯಕ್ತಿಯೋಬ್ಬರು ತಮ್ಮ ಪಾಡಿಗೆ ತಾವು ಗಾಲ್ಫ್ ಆಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಅಮೆರಿಕದ ಒರ್ಲ್ಯಾಂಡೊದ ನಿವಾಸಿ ಸ್ಟೀಲ್ ಲ್ಯಾಫರ್ಟಿ ಕ್ಲಬ್ ಒಂದರಲ್ಲಿ ಗಾಲ್ಫ್ ಆಡುತ್ತಿದ್ದರು. ಈ ವೇಳೆ ಅವರ ಮುಂದೆ ಸುಮಾರು 7 ಅಡಿ ಉದ್ದದ ಮೊಸಳೆ ಬಂದಿದೆ. ಅದು ಅವರ ಸುತ್ತಮುತ್ತಲೇ ಸುಳಿದಾಡುತ್ತಿದ್ದರೂ ಸ್ಟೀಲ್ ಮಾತ್ರ ತಮ್ಮ ಪಾಡಿಗೆ ಗಾಲ್ಫ್ ಆಡುತ್ತಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವಿಡಿಯೋ ನೋಡಿ ಅಚ್ಚರಿ ಪಟ್ಟಿದ್ದಾರೆ.
https://www.instagram.com/p/B1bn2ZWHznm/?utm_source=ig_embed&utm_campaign=embed_video_watch_again
ಸ್ಟೀಲ್ ಅವರು ಜಲಕ್ರೀಡೆ ವೇಕ್‍ಬೋರ್ಡಿಂಗ್ ಆಟಗಾರರಾಗಿದ್ದು, ಜಲಚರಗಳ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮೊಸಳೆ ಪಾಪ ತನ್ನ ಪಾಡಿಗೆ ಹೋಗುತ್ತಿತ್ತು. ಅದಕ್ಕೆ ನಾನು ಏನೂ ತೊಂದರೆ ಮಾಡದೆ ನನ್ನ ಪಾಡಿಗೆ ಆಟವಾಡಿದೆ. ಸ್ವಲ್ಪ ಆತಂಕವಾಯ್ತು, ಆದರೆ ಮೊಸಳೆ ತನ್ನ ಕೆಲಸದಲ್ಲಿ ಬ್ಯುಸಿಯಿತ್ತು ಆದ್ದರಿಂದ ಹೆಚ್ಚು ಭಯವಾಗಿಲ್ಲ ಎಂದು ತಿಳಿಸಿದ್ದಾರೆ.
ಸ್ವತಃ ಸ್ಟೀಲ್ ಅವರೇ ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋವನ್ನು 95 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ ಸಾವಿರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅಲ್ಲದೆ ಫೇಸ್‍ಬುಕ್, ಟ್ವಿಟ್ಟರ್‌ಗಳಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದ್ದು, ಭಾರೀ ಸದ್ದು ಮಾಡುತ್ತಿದೆ.