ಮುಂಬೈ: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ತನ್ನ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಮೂಲಕ ಕನ್ನಡಿಗರ ಮನಸ್ಸು ಗೆದಿದ್ದರು. ಆದರೆ ಈಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ.
ಬಾಲಿವುಡ್ ಚಿತ್ರರಂಗದಿಂದ ದೂರವಿರುವ ಅನುಷ್ಕಾ ಶರ್ಮಾ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮಗೆ ಬಂದಂತಹ ಪಾಸಿಟಿವ್ ಟ್ವೀಟ್‍ಗಳನ್ನು ಓದಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.
Time for some internet positivity rn. ✨???? #HappyTweets #LoveAndLightProject pic.twitter.com/6ZUxXavrQT
— Anushka Sharma (@AnushkaSharma) August 21, 2019
ಈ ವಿಡಿಯೋ ಹಾಕಿ ಅದಕ್ಕೆ ಅನುಷ್ಕಾ, ಈಗ ಇಂಟರೆನೆಟ್ ಪಾಸಿಟಿವಿಟಿಯ ಸಮಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಹ್ಯಾಪಿ ಟ್ವೀಟ್ಸ್ ಎಂಬ ಹ್ಯಾಶ್‍ಟ್ಯಾಗ್ ಬಳಸಿದ್ದಾರೆ. ವಿಡಿಯೋದಲ್ಲಿ ಅನುಷ್ಕಾ ಇಂಗ್ಲಿಷ್‍ನಲ್ಲೇ ಎಲ್ಲ ಟ್ವೀಟ್‍ಗಳನ್ನು ಓದಿದ್ದಾರೆ. ಬಳಿಕ ವಿಡಿಯೋ ಕೊನೆಯಲ್ಲಿ ಅನುಷ್ಕಾ ‘ಅಷ್ಟೇ’ ಎಂಬ ಪದವನ್ನು ಹೇಳಿದ್ದಾರೆ.
ಅನುಷ್ಕಾ ಈ ಪದವನ್ನು ಗೊತ್ತಿದ್ದು ಹೇಳಿದ್ದರೋ, ಗೊತ್ತಿಲ್ಲದೆ ಹೇಳಿದ್ದಾರೋ ತಿಳಿದು ಬಂದಿಲ್ಲ. ಆದರೆ ಅನುಷ್ಕಾ ಹೇಳಿದ ಈ ಒಂದು ಪದಕ್ಕೆ ಅಭಿಮಾನಿಗಳು ರೀ-ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮೂಲತಃ ಉತ್ತರ ಪ್ರದೇಶದವರಾಗಿರುವ ಅನುಷ್ಕಾ ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಓದಿದ್ದರು. ಬಳಿಕ ಅವರು ತಮ್ಮ ಪದವಿಯನ್ನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಡೆದುಕೊಂಡರು. ಇದಾದ ಬಳಿಕ ಅನುಷ್ಕಾ ಮುಂಬೈಗೆ ಹೋಗಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟರು.
ಕಳೆದ ತಿಂಗಳು ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿ ಪ್ರಫುಲ್ಲಾ ಅವರ ಹುಟ್ಟುಹಬ್ಬದಂದು ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಆ ಫೋಟೋಗೆ “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದಿದ್ದರು.