ಕೇಕ್ ತಯಾರಿಸಿ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲಿರುವ ಆಲಿಯಾ ಭಟ್

Public TV
1 Min Read
alia bhatt 1

ಮುಂಬೈ: ಕೆಲವು ನಟ-ನಟಿಯರಂತೆ ಆಲಿಯಾ ಭಟ್ ಕೂಡ ವಿಭಿನ್ನ ರೀತಿಯಲ್ಲಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಅರ್ಜುನ್ ಕಪೂರ್ ಸಹೋದರಿ ಅಂಶುಲಾ ಕಪೂರ್ ಅವರ ಆನ್‍ಲೈನ್ ಫಂಡ್ ರೈಸಿಂಗ್ `ಫ್ಯಾನ್ ಕೈಂಡ್’ ಮೂಲಕ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲು ಆಲಿಯಾ ಮುಂದಾಗಿದ್ದಾರೆ.

ವಿಶೇಷವೆಂದರೆ ಆಲಿಯಾ ಅವರು ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲು ಕೇಕ್ ಬೇಕ್ ಮಾಡಲಿದ್ದಾರೆ. `ಫ್ಯಾನ್ ಕೈಂಡ್’ ಸಂಸ್ಥೆಯ ಸಹಯೋಗದೊಂದಿಗೆ ಪಾಕತಜ್ಞೆ ಪೂಜಾ ಧಿಂಗ್ರಾ ಮಾರ್ಗದರ್ಶನದಲ್ಲಿ ಅಭಿಮಾನಿಗಳಿಗೆ ಕೇಕ್ ತಯಾರಿಸಲು ಅವಕಾಶ ಮಾಡಿ ಕೊಡಲಿದೆ.

alia bhatt

ಇದರಲ್ಲಿ ಭಾಗವಹಿಸುವವರು ಕನಿಷ್ಠ 300 ರೂ. ಅಥವಾ ಅದಕ್ಕಿಂತ ಹೆಚ್ಚು ಹಣವನ್ನೂ ಕೂಡ ನೀಡಬಹುದಾಗಿದೆ. ಅಂತಿಮವಾಗಿ ಓರ್ವ ಅಭಿಮಾನಿಗೆ ಆಲಿಯಾ ಜೊತೆ ಕೇಕ್ ತಯಾರಿಸುವ ಅವಕಾಶ ಸಿಗಲಿದೆ. ಈ ವಿಶೇಷ ಪ್ರಯತ್ನದ ಮೂಲಕ ಸಂಗ್ರಹವಾಗುವ ಹಣವನ್ನು ಪ್ರಾಣಿಗಳನ್ನು ನೋಡಿಕೊಳ್ಳುವ ಸರ್ಕಾರೇತರ ಸಂಸ್ಥೆಗೆ ನೀಡಲಾಗುತ್ತದೆ.

ಈ ಬಗ್ಗೆ ಆಲಿಯಾ ಭಟ್ ಅವರು ಮಾತನಾಡಿ, ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹ ಮಾಡಿವುದನ್ನು ನಾನು ನಿಜವಾಗಿಯೂ ನಂಬುತ್ತೇನೆ. ಈ ವಿನೂತನ ಪ್ರಯತ್ನಕ್ಕೆ ‘ವರ್ಡ್ ಫಾರ್ ಆಲ್’ ಜೊತೆ ಕೈಜೋಡಿಸಿದ್ದೇನೆ. ಮುಂಬೈ ಮೂಲದ ಎನ್‍ಜಿಒ ‘ವರ್ಡ್ ಫಾರ್ ಆಲ್’ ಬೀದಿಯಲ್ಲಿರುವ ನಾಯಿಗಳು, ಬೆಕ್ಕುಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡುವ ಒಳ್ಳೆಯ ಕೆಲಸ ಮಾಡುತ್ತಿದೆ. ಇದು ಒಳ್ಳೆಯ ವಿಚಾರ ಎಂದು ಹೇಳಿದ್ದಾರೆ.

anshula alia

ಕಾರ್ಯಕ್ರಮದಲ್ಲಿ ಸಂಗ್ರಹವಾಗುವ 70% ದೇಣಿಗೆಯನ್ನು ‘ವರ್ಡ್ ಫಾರ್ ಆಲ್’ ಎನ್‍ಜಿಒಗೆ ನೀಡಲಾಗುತ್ತದೆ. ವರ್ಡ್ ಫಾರ್ ಆಲ್ ಸಂಸ್ಥೆ ಬೀದಿ ನಾಯಿಗಳನ್ನು, ಇತರೆ ಪ್ರಾಣಿಗಳನ್ನು ದತ್ತು ಪಡೆದು ಅದನ್ನು ನೋಡಿಕೊಳ್ಳುವ ಕೆಲಸ ಮಾಡುತ್ತದೆ. ಆದ್ದರಿಂದ ಈ ಸಂಸ್ಥೆ ಜೊತೆ ಆಲಿಯಾ ಒಳ್ಳೆಯ ಒಡನಾಟ ಹೊಂದಿದ್ದಾರೆ.

ಈ ಬಗ್ಗೆ ಅಂಶುಲಾ ಕಪೂರ್ ಅವರು ಪ್ರತಿಕ್ರಿಯಿಸಿ, ಇಂತಹ ಒಳ್ಳೆಯ ಕೆಲಸಕ್ಕೆ ಆಲಿಯಾ ಜೊತೆ ಕೈ ಜೋಡಿಸಿರುವುದಕ್ಕೆ ಖುಷಿಯಾಗಿದೆ. ನಾನು ಕೂಡ ಪ್ರಾಣಿಯನ್ನು ಸಾಕುತ್ತಿದ್ದೇನೆ. ಹೀಗಾಗಿ ಪ್ರಾಣಿ ಪ್ರೇಮಿಯಾಗಿರುವ ನನಗೆ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸುವುದು ಖುಷಿ ನೀಡುತ್ತಿದೆ. ಹೀಗಾಗಿ ಫ್ಯಾನ್ ಕೈಂಡ್ ಪ್ರಾಣಿಗಳ ಸಂರಕ್ಷಣೆ ಹಾಗೂ ವರ್ಡ್ ಫಾರ್ ಆಲ್ ಸಂಸ್ಥೆಗೆ ಸಹಾಯ ಮಾಡಲು ಸಾಧ್ಯವಾಯ್ತು ಎಂದು ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *