ರವಿಮಾಮನ ಚಿತ್ರಕ್ಕೆ ಅತಿಥಿಯಾಗಿ ಬಂದ ಪೈಲ್ವಾನ್

Public TV
1 Min Read
collage kiccha sudeep ravi

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ ನಟಿಸುತ್ತಿರುವ ರವಿ ಬೊಪಣ್ಣ ಚಿತ್ರದ ಚಿತ್ರೀಕರಣ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆಯಿತು. ರವಿಚಂದ್ರನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇಂದು ನಡೆದ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದು ಕೋರ್ಟ್ ಸನ್ನಿವೇಶವನ್ನು ಸೆಂಟ್ರಲ್ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ರವಿಚಂದ್ರನ್ ಅವರ ನಿರ್ದೇಶನದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಹಿರಿಯ ನಟರಾದ ರಾಮಕೃಷ್ಣ, ಜೈ ಜಗದೀಶ್ ಮತ್ತು ಲಕ್ಷ್ಮಣ್ ಬಹುತಾರಾಗಣ ಬಳಗವೆ ಇದೆ.

vlcsnap 2019 08 18 17h28m44s156

ಚಿತ್ರದ ಕಥೆಯ ಗುಟ್ಟನ್ನು ಬಿಟ್ಟುಕೊಡದ ರವಿಚಂದ್ರನ್, ಈ ಚಿತ್ರದಲ್ಲಿ ಒಂದು ಅತಿಥಿ ಪಾತ್ರದಲ್ಲಿ ಸುದೀಪ್ ನಟಿಸುತ್ತಿರುವುದು. ಈ ಚಿತ್ರ ಆರಂಭ ಆಗಿದ್ದು ಸುದೀಪ್ ನಿಂದಲೇ, ಚಿತ್ರ ಹೈಲೈಟ್ ಆಗೋದು ಸುದೀಪ್ ನಿಂದಲೇ ಎಂದು ತಿಳಿಸಿದರು. ಸುದೀಪ್ ಈ ಚಿತ್ರದಲ್ಲಿನ ಪಾತ್ರಕ್ಕೆ ಕೇಳಿದಾಗ ಏನು ಮಾತಾಡದೇ ಒಪ್ಪಿಕೊಂಡಿದ್ದಾರೆ. ಅವರಿಗೆ ನಾನು ಸದಾ ಪ್ರೀತಿ ಪೂರ್ವಕವಾಗಿ ಇರುತ್ತೇನೆ ಎಂದು ಹೇಳಿದ್ದಾರೆ.

vlcsnap 2019 08 18 17h26m08s968

ಇದೇ ವೇಳೆ ಮಾತನಾಡಿದ ಕಿಚ್ಚ ಸುದೀಪ್, ರವಿ ಸರ್ ಅವರ ಚಿತ್ರದಲ್ಲಿ ಅಭಿನಯಿಸುವುದು ನನ್ನ ಪುಣ್ಯ. ಅವರು ಈ ರೀತಿ ಪಾತ್ರ ಇದೆ ಎಂದು ಹೇಳಿದ್ದರು. ನಾನು ಎಲ್ಲಿ, ಯಾವಾಗ ಬರಬೇಕು ಎಂದು ಕೇಳಿದೆ ಅಷ್ಟೇ ಈಗ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬರುತ್ತೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *