– ಚಾಮರಾಜನಗರದಲ್ಲಿ ಸಂತ್ರಸ್ತರು ಅಸ್ವಸ್ಥ
ಕೊಡಗು/ಚಾಮರಾಜನಗರ: ಕೊಡಗಿನ ವಿರಾಜಪೇಟೆ ನಗರದಲ್ಲಿರುವ ನೆಹರು ನಗರದ ಬೆಟ್ಟ ಕುಸಿಯುವ ಭೀತಿ ಎದುರಾಗಿದೆ. ಕುಟುಂಬಸ್ಥರನ್ನು ಸ್ಥಳಾಂತರ ಮಾಡಲಾಗಿರೋ ಮನೆಯೊಳಗೆ ಸುಮಾರು 6 ಅಡಿಗಳಷ್ಟು ಬಿರುಕು ದೊಡ್ಡದಾಗಿದೆ.
ಮಡಿಕೇರಿಯ ಕಟ್ಟೆಮಾಡು ಗ್ರಾಮದಲ್ಲಿ 34 ಮನೆಗಳು ನೆಲಸಮವಾಗಿದ್ದು ಇಲ್ಲಿನ ಜನ ಎಲ್ಲವನ್ನೂ ಕಳೆದುಕೊಂಡಿದ್ದಾರೆ. 4 ಮದುವೆ ಕ್ಯಾನ್ಸಲ್ ಆಗಿವೆ. ಆಸ್ತಿಪಾಸ್ತಿ ಕಳೆದುಕೊಂಡು ಕುಟುಂಬಗಳು ಈಗ ಕಣ್ಣೀರಿಡುತ್ತಿವೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ನೆರೆ ಪರಿಹಾರ ಕೇಂದ್ರದಲ್ಲಿ ಆಹಾರ ಸೇವಿಸಿ ಸಂತ್ರಸ್ತರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, 14 ಮಂದಿ ಅಸ್ವಸ್ಥರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಆಶ್ರಯ ಪಡೆದಿದ್ದ ಗ್ರಾಮಸ್ಥರು ಜ್ವರ ಹಾಗೂ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ.
ಇತ್ತ ಜಲಾಸುರನ ಆರ್ಭಟದ ಬಳಿಕ ಬೆಳಗಾವಿ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಪರಿಹಾರ ಕೇಂದ್ರಗಳಲ್ಲಿದ್ದ ಜನ ಮನೆ, ತೋಟದ ಕಡೆ ಮುಖ ಮಾಡುತ್ತಿದ್ದಾರೆ. ಆದರೆ, ಕೊಚ್ಚಿ ಹೋದ ಮನೆ, ತೋಟ, ರಸ್ತೆ ನೋಡಿ ಮರುಗುತ್ತಿದ್ದಾರೆ. ರಾಮದುರ್ಗ ತಾಲೂಕಿನ ಕಿಲಬನೂರು ಗ್ರಾಮದಲ್ಲಿ ಮನೆಗಳಿಗೆ ಹೋದ ಜನ ಅಳಿದುಳಿದ ವಸ್ತುಗಳನ್ನು ಆಯ್ದುಕೊಂಡರು. ಆದರೆ, ಸೊಸೆಯ ಸೀಮಂತಕ್ಕೆ ಇಟ್ಟಿದ್ದ ಸೀರೆ, ಬಂಗಾರ ಗಂಗೆಯ ಪಾಲಾಗಿದೆ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದರು.