ನವದೆಹಲಿ: ಟೀಂ ಇಂಡಿಯಾ ಅನುಭವಿ ಆಟಗಾರ ಸುರೇಶ್ ರೈನಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕೆಲ ಸಮಯದಿಂದ ಮೊಣ ಕಾಲಿನ ನೋವಿನಿಂದ ಬಳಲುತ್ತಿದ್ದ ಅವರಿಗೆ ನೆದರ್ಲೆಂಡ್ಸ್ ನ ಆ್ಯಸ್ಟರ್ ಡ್ಯಾಮ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಮೊಣ ಕಾಲಿನ ನೋವಿನಿಂದ ಬಳಲುತ್ತಿದ್ದ ರೈನಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, 4 ರಿಂದ 6 ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ. ಅವರು ಬಹುಬೇಗ ಚೇತರಿಸಿಕೊಳ್ಳಲಿ ಎಂದು ಫೋಟೋ ಟ್ವೀಟ್ ಮಾಡಿದೆ. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ರೈನಾ ಬಹುಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.
Mr Suresh Raina underwent a knee surgery where he had been facing discomfort for the last few months. The surgery has been successful and it will require him 4-6 week of rehab for recovery.
We wish him a speedy recovery ???? pic.twitter.com/osOHnFLqpB
— BCCI (@BCCI) August 9, 2019
ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ 32 ವರ್ಷದ ರೈನಾ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಯಿಸುತ್ತಿದ್ದರು. ಭಾರತ ತಂಡವನ್ನು ಅಂತಿಮವಾಗಿ ಕಳೆದ ಜುಲೈನಲ್ಲಿ ಪ್ರತಿನಿಧಿಸಿದ್ದರು. 2019ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿ ಮೂರು ಅರ್ಧ ಶತಕ ಸಿಡಿಸಿದ್ದರು. ಸದ್ಯ ರೈನಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಆಗಸ್ಟ್ 17 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ರೈನಾ ಭಾರತ ಪರ 226 ಏಕದಿನ ಆಡಿರುವ ರೈನಾ 5,615 ರನ್ ಹಾಗೂ 78 ಟಿ20 ಪಂದ್ಯಗಳಿಂದ 1,605 ರನ್, ಟೆಸ್ಟ್ ಕ್ರಿಕೆಟಿನಲ್ಲಿ 18 ಪಂದ್ಯಗಳಿಂದ 768 ರನ್ ಗಳಿಸಿದ್ದಾರೆ.