ಬೆಂಗಳೂರು: ಅಧಿಕಾರ ಕಳೆದುಕೊಂಡ ದೋಸ್ತಿಗಳು ಇಂದು ಸೈಲೆಂಟ್ ಆಗಿರುತ್ತಾರಾ ಅಥವಾ ವೈಲೆಂಟ್ ಆಗ್ತಾರಾ ಅನ್ನೋದು ಕತೂಹಲ ಹುಟ್ಟಿಸಿದೆ.
ಹೌದು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ಇಂದು ವಿಶ್ವಾಸಮತ ಸಾಬೀತಿಗೆ ಮುಂದಾಗಿದ್ದಾರೆ. ಆದರೆ ಅಧಿಕಾರ ಕಳೆದುಕೊಂಡ ದೋಸ್ತಿ ನಾಯಕರು ಸಹ ತಮ್ಮದೇ ಆದ ತಂತ್ರಗಾರಿಕೆ ಮಾಡುವ ಸಾಧ್ಯತೆ ಇದೆ.
ಬಹುಮತಕ್ಕೆ ಬೇಕಾಗುವ 113 ಸದಸ್ಯ ಬಲ ಇಲ್ಲಾ ಅನ್ನೋ ಕಾರಣಕ್ಕೆ ದೋಸ್ತಿಗಳ ಸದನದಲ್ಲಿ ಬಹುಮತ ಸಾಬೀತಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಬಹುದು. ಆದರೆ 105 ಸಂಖ್ಯಾಬಲ ಹೊಂದಿರುವ ಬಿಜೆಪಿ ಬಹಮತ ಸಾಬೀತು ಮಾಡುವುದು ಬಹುತೇಕ ಖಚಿತವಾಗಿದೆ.
ಸಿಎಂ ಯಡಿಯೂರಪ್ಪನವರ ಬಹುಮತ ಸಾಬೀತನ್ನ ತಡೆಯುವುದು ದೋಸ್ತಿಗಳ ಕೈಯಲ್ಲಿ ಸಾಧ್ಯವಿಲ್ಲ ಆದರೆ, ಪೂರ್ಣ ಸಂಖ್ಯಾಬಲ ಇಲ್ಲ ಅನ್ನೋ ಕಾರಣಕ್ಕೆ ಸದನದಲ್ಲೆ ಪ್ರತಿಭಟಿಸಬಹುದು. ಅಲ್ಲದೆ ಚರ್ಚೆಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿಯಬಹುದು. ಅಲ್ಲದೆ ಬಹುಮತ ಸಾಬೀತು ಪ್ರಕ್ರಿಯೆಯನ್ನೇ ಬಹಿಷ್ಕರಿಸಿ ಹೊರಬರುವ ಸಾಧ್ಯತೆಗಳೂ ಇವೆ.
ಒಟ್ಟಿನಲ್ಲಿ ಬಿಜೆಪಿಯ ಬಹುಮತ ಸಾಬೀತು ಪ್ರಕ್ರಿಯೆಯನ್ನ ದೋಸ್ತಿಗಳು ಅಸಹಾಯಕವಾಗಿ ಕುಳಿತು ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.