ಪಕ್ಷಪಾತಿಯಾಗಿ ಸ್ಪೀಕರ್ ನಿರ್ಧಾರ ತೆಗೆದುಕೊಂಡಿದ್ದಾರೆ- ಫೇಸ್‍ಬುಕ್‍ನಲ್ಲಿ ಶಿವರಾಮ್ ಹೆಬ್ಬಾರ್ ಕಿಡಿ

Public TV
1 Min Read
Shivaram Hebbar a

ಕಾರವಾರ: ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಸ್ಥಾನದಿಂದ ಅತೃಪ್ತರನ್ನು ಅನರ್ಹಗೊಳಿಸಿದ್ದು, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ ಕಾರ್ಯಕರ್ತರಿಗೆ ಸ್ವಷ್ಟನೆ ನೀಡಿದ್ದಾರೆ.

ಸ್ಪೀಕರ್ ನಿರ್ಣಯ ಅತೀ ಶೀಘ್ರದಲ್ಲೇ ಸುಪ್ರೀಂ ಪರಿಶೀಲನೆಗೆ ಒಳಪಡಲಿದೆ. ನ್ಯಾಯಕ್ಕೆ ಜಯ ಸಿಗಲಿದೆ. ಯಾರೂ ಧೃತಿಗೆಡಬೇಕಿಲ್ಲ, ನನ್ನ ಅಭಿಮಾನಿಗಳು ಹಾಗೂ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ವಿಚಾರವನ್ನು ಜನತಾ ನ್ಯಾಯಾಲಯದ ಮುಂದೆ ಇಡಲಿದ್ದೇನೆ. ನಿಮ್ಮೆಲ್ಲರಿಗೆ ನನ್ನ ನಿರ್ಧಾರಕ್ಕೆ ಕಾರಣವೇನು ಎನ್ನುವುದನ್ನ ತಿಳಿಸುತ್ತೇನೆ. ನಿಮ್ಮೆಲ್ಲರ ಆಶಯದಂತೆ ನನ್ನ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

speakr biee

ಪೋಸ್ಟ್ ನಲ್ಲಿ ಏನಿದೆ?
ಮಾನ್ಯ, ನನ್ನ ಅಭಿಮಾನಿ ಕಾರ್ಯಕರ್ತ ಬಂಧುಗಳೆ, ಸುಪ್ರೀಂ ಆದೇಶವಿದ್ದಾಗಲೂ, ರಾಜೀನಾಮೆಯನ್ನು ಮೊದಲೇ ನೀಡಿದ್ದರೂ, ಕೆಲವರ ಒತ್ತಡದಿಂದ ಪಕ್ಷಪಾತಿಯಾಗಿ ತೆಗೆದುಕೊಂಡ ಇಂದಿನ ಸ್ಪೀಕರ್ ಅನರ್ಹತೆ ನಿರ್ಣಯ ಅತೀ ಶೀಘ್ರದಲ್ಲೇ ಸುಪ್ರೀಂ ಪರಿಶೀಲನೆಗೆ ಒಳಪಡಲಿದೆ ಹಾಗೂ ನ್ಯಾಯಕ್ಕೆ ಜಯವಾಗಲಿದೆ.

https://www.facebook.com/shivaramhebbar.inc/posts/532700477268363

ಯಾರೂ ಧೃತಿಗೆಡಬೇಕಾಗಿಲ್ಲ, ನನ್ನ ಅಭಿಮಾನಿಗಳು ಹಾಗೂ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ, ಮತ್ತೆ ಜನತಾ ನ್ಯಾಯಾಲಯದ ಮುಂದೆ ಹೋಗಲಿದ್ದೇನೆ. ನಿಮ್ಮೆಲ್ಲರಲ್ಲಿ ನನ್ನ ಈ ನಿರ್ಧಾರಕ್ಕೆ ಕಾರಣಗಳನ್ನು ವಿಸ್ತಾರವಾಗಿ ತಿಳಿಸುತ್ತೇನೆ ಹಾಗೂ ನಿಮ್ಮೆಲ್ಲರ ಆಶಯದಂತೆ ನನ್ನ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ.

ಸ್ಪೀಕರ್ ನೀಡಿದ ನ್ಯಾಯಸಮ್ಮತವಲ್ಲದ ತೀರ್ಪಿಗೆ ಖಂಡಿತವಾಗಿಯೂ ಸುಪ್ರೀಂನಲ್ಲಿ ನ್ಯಾಯ ಸಿಗಲಿದೆ ಹಾಗೂ ನನ್ನ ರಾಜಕೀಯ ನಿರ್ಧಾರಕ್ಕೆ ನನ್ನ ಯಲ್ಲಾಪುರ-ಮುಂಡಗೋಡ್-ಬನವಾಸಿ ಕ್ಷೇತ್ರದ ಮತದಾರರು/ಅಭಿಮಾನಿ ಕಾರ್ಯಕರ್ತರು ನನ್ನ ಪರ ತೀರ್ಪು ನೀಡಲಿದ್ದಾರೆ ಎಂಬ ಅಚಲ ವಿಶ್ವಾಸವಿದೆ. ನಿಮ್ಮ ವಿಶ್ವಾಸಿ ಶಿವರಾಮ ಹೆಬ್ಬಾರ್ ಎಂದು ಬರೆದು ಪೋಸ್ಟ್ ಮಾಡಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *