ಇಸ್ಲಾಮಾಬಾದ್: ಭಾರತ ಕ್ರಿಕೆಟ್ ತಂಡದ ಆಟಗಾರ ಎಂ.ಎಸ್ ಧೋನಿ ಅವರು ನಡೆಗೆ ಪಾಕಿಸ್ತಾನದ ನಟಿ ಫಿದಾ ಆಗಿದ್ದಾರೆ. ಅಲ್ಲದೆ 1998ರಲ್ಲಿ ನಡೆದ ಒಂದು ಘಟನೆಯೊಂದು ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ನಟಿ ಮತಿರಾ ಖಾನ್ ಅವರು ಏಷ್ಯಾ ಕಪ್ ಸಂದರ್ಭದಲ್ಲಿ ಧೋನಿ ತಮ್ಮ ಜೊತೆ ಹೇಗೆ ನಡೆದುಕೊಂಡರು ಎಂಬುದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡ ತಂಗಿದ್ದ ಹೋಟಿಲಿನಲ್ಲಿ ಮತಿರಾ ಖಾನ್ ತಂಗಿದ್ದರು. ಈ ವೇಳೆ ಮತಿರಾ ತಮ್ಮ ನೆಚ್ಚಿನ ಪಾಕಿಸ್ತಾನದ ಆಟಗಾರನ ಆಟೋಗ್ರಾಫ್ ಪಡೆಯಲು ಹೋಗಿದ್ದರು.
ನಾನು ಪಾಕಿಸ್ತಾನ ಕ್ರಿಕೆಟಿಗರ ಬಳಿ ಆಟೋಗ್ರಾಫ್ ಕೇಳಲು ಹೋಗಿದೆ. ಈ ವೇಳೆ ಕೆಲವು ಆಟಗಾರರು ನನಗೆ ಆಟೋಗ್ರಾಫ್ ನೀಡಿದ್ದರು. ಆದರೆ ಕೆಲವರು ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದು ನನ್ನ ಮೇಲೆ ರೇಗಿದ್ದರು. ಅವರು ನನ್ನ ಮೇಲೆ ರೇಗಾಡಿದ್ದರಿಂದ ನನ್ಮ ಮನಸ್ಸಿಗೆ ನೋವಾಗಿ ಅತ್ತುಬಿಟ್ಟಿದ್ದೆ. ಬಳಿಕ ನಾನು ನನ್ನ ಟೇಬಲ್ ಬಳಿ ಹೋಗುತ್ತಿದೆ. ಈ ವೇಳೆ ಭಾರತೀಯ ಕ್ರಿಕೆಟ್ ಆಟಗಾರರೊಬ್ಬರು ನಾವು ಕೂಡ ಕ್ರಿಕೆಟ್ ಆಟಗಾರರು. ನಮ್ಮ ಆಟೋಗ್ರಾಫ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು.
ನಾನು ಅವರ ಧ್ವನಿ ಕೇಳಿ ಹಿಂದೆ ತಿರುಗಿ ನೋಡಿದ್ದಾಗ ಅಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದರು. ಧೋನಿ ನನಗೆ ಆಟೋಗ್ರಾಫ್ ಮಾತ್ರವಲ್ಲದೆ ಅವರ ಪಕ್ಕದಲ್ಲಿ ಇದ್ದ ಸೀಟ್‍ನಲ್ಲಿ ಕುಳಿತುಕೊಳ್ಳಲು ಹೇಳಿ ನನ್ನ ಜೊತೆ ಮಾತುಕತೆ ನಡೆಸಿದ್ದರು ಎಂದು ಮತಿರಾ ಸಂದರ್ಶನದಲ್ಲಿ ತಿಳಿಸಿದ್ದಾರೆ.