ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದೆ. ಈ ಮೂಲಕ ರಾಜ್ಯ ರಾಜಕೀಯದ ಹೈಡ್ರಾಮಾ ಅಂತ್ಯವಾಗಲಿದೆ.
3 ದಿನದ ಆಟದಲ್ಲಿ ದೋಸ್ತಿ ಗೆಲ್ಲುತ್ತಾ ಅಥವಾ ಬಿಜೆಪಿ ಗೆಲ್ಲುತ್ತಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ಮೂರು ದಿನದಲ್ಲಿ ಮೈತ್ರಿ ವಿರುದ್ಧ ಬಿಜೆಪಿ ಗೆಲುವು ಸಾಧಿಸಲು ಕೆಲವೊಂದು ಪ್ಲಾನ್ ಗಳನ್ನು ಮಾಡಿಕೊಂಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಪ್ಲಾನ್ ಏನು..?
ಅತೃಪ್ತರು ದೋಸ್ತಿಗಳ ಕೈಗೆ ಸಿಗದಂತೆ ನೋಡಿಕೊಳ್ಳುವುದು. ನಾಲ್ವರು ಅತೃಪ್ತರಿಗೆ ಗಾಳ ಹಾಕುವುದು. ರಿವರ್ಸ್ ಆಪರೇಷನ್‍ಗೆ ತಮ್ಮ ಶಾಸಕರು ಸಿಗದಂತೆ ಮಾಡುವುದು. ಎಂಟಿಬಿ ನಾಗರಾಜ್ ಅವರನ್ನು ಮುಂಬೈ ತಲುಪಿಸೋದು. ಹಾಗೂ ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆಯದಂತೆ ನೋಡಿಕೊಳ್ಳುವುದು ಬಿಜೆಪಿ ಪ್ಲಾನ್ ಆಗಿದೆ.
ಯಡಿಯೂರಪ್ಪ ಬಲ ಮೈತ್ರಿ ನಾಯಕರು ಅತೃಪ್ತರ ಮನವೊಲಿಕೆಯಲ್ಲಿ ಸಕ್ಸಸ್ ಆಗಿದೆ. ಇತ್ತ ಅತೃಪ್ತರ ಓಲೈಕೆಗೆ ಮೈತ್ರಿ ನಾಯಕರ ಕಸರತ್ತು ಮುಂದುವರಿದಿದೆ. ಆದರೆ ಅತೃಪ್ತರು ಅಡ್ಡಗೋಡೆ ಮೇಲೆ ದೀಪ ಇಡುತ್ತಿರೋದು ಮೈತ್ರಿ ನಾಯಕರ ತಲೆ ನೋವು ಹೆಚ್ಚಿಸಿದೆ. ಅತೃಪ್ತರು ಇನ್ನೊಂದು ಕಡೆ ಸುಪ್ರೀಂಕೋರ್ಟ್ ನಲ್ಲೂ ಸಿಕ್ಕಿ ಹಾಕಿಕೊಂಡಿದ್ದಾರೆ. ಇದು ಯಡಿಯೂರಪ್ಪ ಅವರಿಗೆ ಎರಡನೇ ಅತೀ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಅತೃಪ್ತರು ಯೂ ಟರ್ನ್ ಹೊಡೆದರೂ ಚಿಂತೆ ಇಲ್ಲ. ಇನ್ನೂ ನಾಲ್ವರು ಬಿಜೆಪಿ ಕಡೆ ಹೋಗಲು ರೆಡಿ ಇದ್ದಾರೆ ಎಂಬ ಮಾಹಿತಿ ಇದೆ.
ರೆಸಾರ್ಟ್ ನಲ್ಲಿ ಕುಳಿತುಕೊಂಡೇ ಬಿಎಸ್‍ವೈ ಮತ್ತೆ ನಾಲ್ವರು ಅತೃಪ್ತರಿಗೆ ಗಾಳ ಹಾಕಿದ್ದಾರೆ. ಹೀಗಾಗಿ ಯಡಿಯೂರಪ್ಪ ಪ್ಲಾನ್ ಗಳ ಸರಪಳಿಯನ್ನು ಸಿಎಂ ಮುರಿದು ವಿಶ್ವಾಸ ಮತದಲ್ಲಿ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.