ಪತ್ನಿ ಜೊತೆಗಿನ ತನ್ನ ವಿಡಿಯೋ ಪೋರ್ನ್ ತಾಣದಲ್ಲಿ ನೋಡಿ ಬೆಚ್ಚಿಬಿದ್ದ

Public TV
2 Min Read
smart tv

ನವದೆಹಲಿ: ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವಾಗ ತನ್ನ ಹೆಂಡತಿಯೊಂದಿಗೆ ಕಳೆದ ಬೆಡ್‍ರೂಂ ವಿಡಿಯೋ ಕಾಣಿಸಿದ್ದನ್ನು ನೋಡಿ ವ್ಯಕ್ತಿಯೊಬ್ಬ ದಂಗಾಗಿದ್ದಾನೆ.

ಸೂರತ್ ಮೂಲದ ಮಹೇಶ್ ಬೆಡ್‍ರೂಂನ ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವ ಹುಚ್ಚು ಬೆಳೆಸಿಕೊಂಡಿದ್ದ. ಒಂದು ದಿನ ತನ್ನ ಟಿವಿ ಆನ್ ಮಾಡಿ ನೋಡುತ್ತ ಕುಳಿತ್ತಿದ್ದಾನೆ. ಈ ವೇಳೆ ವಿಡಿಯೋಗಳನ್ನು ಸರ್ಚ್ ಮಾಡುತ್ತಿದ್ದಾಗ ವೆಬ್‍ಸೈಟ್ ಒಂದರಲ್ಲಿ ತಾನು ತನ್ನ ಹೆಂಡತಿಯೊಂದಿಗೆ ಕಳೆದ ಖಾಸಗಿ ವಿಡಿಯೋವನ್ನು ನೋಡಿ ದಂಗಾಗಿದ್ದಾನೆ.

smart tv 4

ಪತ್ನಿ ಜೊತೆಗಿನ ಖಾಸಗಿ ವಿಡಿಯೋ ಈ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಆಗಿದ್ದು ಹೇಗೆ ಎಂದು ತಿಳಿದು ಚಿಂತಕ್ರಾಂತನಾಗಿದ್ದಾನೆ. ಪೊಲೀಸರಿಗೆ ದೂರು ನೀಡಿದರೆ ನಮ್ಮ ಕುಟುಂಬಕ್ಕೆ ಅವಮಾನವಾಗಬಹುದು ಎಂಬುದನ್ನು ತಿಳಿದು ಸೈಬರ್ ಸೆಕ್ಯೂರಿಟಿ ಹಾಗೂ ಸೈಬರ್ ಅಪರಾಧಗಳ ಕುರಿತು ಉತ್ತಮ ಜ್ಞಾನ ಹೊಂದಿರುವ ಕೆಲವು ಸೈಬರ್ ತಜ್ಞರನ್ನು ಸಂಪರ್ಕಿಸಿದ್ದಾನೆ.

smart tv 3

ಆಗ ಸೈಬರ್ ತಜ್ಞರು ಈ ವಿಡಿಯೋ ಸೆರೆ ಆಗಿದ್ದು ಹೇಗೆ ಎಂದು ತಿಳಿಯಲು ಬೆಡ್ ರೂಂನಲ್ಲಿ ಯಾರಾದರೂ ಹಿಡನ್ ಕ್ಯಾಮೆರಾಗಳನ್ನು ಇಟ್ಟಿದ್ದಾರೋ ಎನ್ನುವುದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಹಿಡನ್ ಕ್ಯಾಮೆರಾ ಪತ್ತೆಯಾಗಿರಲಿಲ್ಲ. ಯಾವುದೇ ಕ್ಯಾಮೆರಾ ಇಲ್ಲದೇ ವಿಡಿಯೋ ಅಪ್ಲೋಡ್ ಆಗಿದ್ದು ಹೇಗೆ ಎನ್ನುವುದನ್ನು ತಿಳಿಯಲು ಸೈಬರ್ ತಜ್ಞರು ತುಂಬ ತಲೆಕೆಡಿಸಿಕೊಂಡಿದ್ದಾರೆ. ಕೊನೆಗೆ ಸೈಬರ್ ಸೆಕ್ಯೂರಿಟಿ ತಜ್ಞರು ಸ್ಮಾರ್ಟ್ ಟಿವಿಯನ್ನು ಪರಿಶೀಲಿಸಿದ್ದಾಗ ಟಿವಿಯನ್ನು ಹ್ಯಾಕ್ ಮಾಡಿದ ವಿಚಾರ ಗೊತ್ತಾಗಿದೆ.

smart tv 5

ಅಪ್ಲೋಡ್ ಆಗಿದ್ದು ಹೇಗೆ?
ಸ್ಮಾರ್ಟ್ ಟಿವಿ ಪರಿಶೀಲಿಸಿದಾಗ ಮಹೇಶ್ ಪೋರ್ನ್ ತಾಣಗಳಿಗೆ ಭೇಟಿ ನೀಡುತ್ತಿದ್ದ ವಿಚಾರ ಗೊತ್ತಾಗಿದೆ. ಈ ವೇಳೆ ಒಂದು ತಾಣಕ್ಕೆ ಭೇಟಿ ನೀಡಿದಾಗ ಹ್ಯಾಕರ್‍ಗಳು ಟಿವಿಯನ್ನು ಹ್ಯಾಕ್ ಪ್ರವೇಶಿಸಿ ದೂರದಿಂದಲೇ ಅದರಲ್ಲಿರುವ ಬಿಲ್ಟ್ ಇನ್ ಕ್ಯಾಮೆರಾವನ್ನು ನಿಯಂತ್ರಿಸತೊಡಗಿದ್ದಾರೆ. ನಂತರ ಈ ಕ್ಯಾಮೆರಾದ ಮೂಲಕ ಬೆಡ್ ರೂಂ ಲೈವ್ ಫೀಡ್ ಪಡೆಯಲು ಆರಂಭಿಸಿದ್ದಾರೆ.

smart tv 6

ಟಿವಿಯಲ್ಲಿ ವೈಫೈ ಸೌಲಭ್ಯವಿದ್ದ ಕಾರಣ ರೆಕಾರ್ಡ್ ಆದ ದೃಶ್ಯ ಅಟೋಮ್ಯಾಟಿಕ್ ಆಗಿ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಆಗುತಿತ್ತು. ಆನ್‍ಲೈನ್ ನಲ್ಲಿ ಅಪ್ಲೋಡ್ ಆಗುತ್ತಿರುವ ವಿಚಾರ ಮಹೇಶ್ ಹಾಗೂ ಪತ್ನಿಯ ಗಮನಕ್ಕೆ ಬಾರದ ಕಾರಣ ವಿಡಿಯೋ ಪೋರ್ನ್ ತಾಣದಲ್ಲಿ ಅಪ್ಲೋಡ್ ಆಗಿತ್ತು.

ರಾಜೇಶ್ ಸೆಕ್ಯೂರಿಟಿ ತಜ್ಞರ ಸಹಾಯದಿಂದ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಆಗಿದ್ದ ವಿಡಿಯೋವನ್ನು ತೆಗೆದು ಹಾಕಿದ್ದಾನೆ. ಆದರೂ ಈ ದೃಶ್ಯ ಈಗಾಗಲೇ ಹಲವು ತಾಣಗಳಲ್ಲಿ ಅಪ್ಲೋಡ್ ಆಗಿದೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *