ಸುದ್ದಿಗೋಷ್ಠಿಯಲ್ಲಿ ಕಂಗನಾ, ಪತ್ರಕರ್ತ ನಡುವೆ ಫೈಟ್: ವಿಡಿಯೋ ನೋಡಿ

Public TV
3 Min Read
kangana collage 1

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಜೊತೆ ಜಗಳವಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ನಟಿ ಕಂಗನಾ, ನಟ ರಾಜ್‍ಕುಮಾರ್ ರಾವ್, ನಿರ್ಮಾಪಕಿ ಏಕ್ತಾ ಕಪೂರ್ ಜೊತೆ ಮುಂಬರುವ ‘ಜಡ್ಜ್ ಮೆಂಟಲ್ ಹೇ ಕ್ಯಾ’ ಚಿತ್ರದ ಹಾಡಿನ ಪ್ರಮೋಶನ್ ಮಾಡಲು ಸುದ್ದಿಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರಾದ ಜಸ್ಟಿನ್ ರಾವ್ ತಮ್ಮ ಹೆಸರನ್ನು ಹೇಳಿ ಪ್ರಶ್ನೆ ಕೇಳಲು ಆರಂಭಿಸಿದರು. ಜಸ್ಟಿನ್ ಹೆಸರು ಕೇಳುತ್ತಿದ್ದಂತೆ ಈ ಹಿಂದೆ ನಡೆದ ಒಂದು ಸಂದರ್ಶನ ಪ್ರಸ್ತಾಪಿಸಿ ಕಂಗನಾ ಗರಂ ಆಗಿದ್ದಾರೆ.

TSB 190708 kangana ranaut 1562585622992 16bd15c69d1 large

‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪತ್ರಕರ್ತ ಜಸ್ಟಿನ್ ಕಂಗನಾ ವಿರುದ್ಧವಾಗಿ ಸುದ್ದಿ ಪ್ರಕಟಿಸಿದ್ದರು. ಈ ವಿಷಯ ನೆನಪಾಗಿ ಕಂಗನಾ, ನಾನು ಈ ಸಿನಿಮಾ ಮಾಡಿ ಏನಾದರೂ ತಪ್ಪು ಮಾಡಿದ್ದೀನಾ? ನಾನು ರಾಷ್ಟ್ರೀಯತೆ ಸಿನಿಮಾ ಮಾಡಿದ್ದಕ್ಕೆ ನನ್ನ ನಡವಳಿಕೆ ಬಗ್ಗೆ ಮಾತನಾಡಿದ್ದೀರಾ ಎಂದು ಪತ್ರಕರ್ತ ಜಸ್ಟಿನ್ ಜೊತೆ ಜಗಳವಾಡಿದ್ದಾರೆ.

Manikarnika 3

ಸುದ್ದಿಗೋಷ್ಠಿಯಲ್ಲಿ ಜಸ್ಟಿನ್ ಕೇಳಿದ ಪ್ರಶ್ನೆಗೆ ಉತ್ತರಿಸದೇ ಕಂಗನಾ ಅವರ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದ್ದಾರೆ. ಮಣಿಕರ್ಣಿಕಾ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ತನ್ನ ವಿರುದ್ಧ ಸುದ್ದಿ ಮಾಡಿ ಉದ್ದೇಶಪೂರ್ವಕವಾಗಿ ಸಿನಿಮಾ ಕೆಟ್ಟದಾಗಿದೆ ಎಂದು ವಿಮರ್ಷೆ ಮಾಡಿದ್ದೀರಿ. ಹಾಗೂ ಕೆಲಸಕ್ಕೆ ಬಾರದ ಟ್ವೀಟ್‍ಗಳನ್ನು ಮಾಡಿದ್ದೀರಿ ಎಂದು ನೇರವಾಗಿಯೇ ಹೇಳಿದ್ದಾರೆ.

kangana ranuat 4

ನಟಿ ಕಂಗನಾ ಆರೋಪ ಮಾಡುತ್ತಿದ್ದಂತೆ ಪತ್ರಕರ್ತ ಜಸ್ಟಿನ್ ನೀವು ಈ ರೀತಿ ನನ್ನ ಮೇಲೆ ಆರೋಪ ಮಾಡಬಾರದು. ಏಕೆಂದರೆ ನಾವು ಏನೂ ಬರೆಯುತ್ತೇವೋ ಸತ್ಯವನ್ನೇ ಬರೆಯುತ್ತೇವೆ. ನಾನು ನಿಮ್ಮ ಬಗ್ಗೆ ಕೆಟ್ಟದಾಗಿ ಏನೂ ಸುದ್ದಿ ಪ್ರಕಟಿಸಿಲ್ಲ ಎಂದು ಜಸ್ಟಿನ್ ಸ್ಪಷ್ಟನೆ ಕೊಟ್ಟರೂ ಸಹ ಕಂಗನಾ ಸುಮ್ಮನಾಗಲಿಲ್ಲ. ಅಲ್ಲದೆ ಅಲ್ಲಿದ್ದ ಬೇರೆ ಪತ್ರಕರ್ತರು ಸಹ ಚಿತ್ರದ ವಿರುದ್ಧ ಹಾಗೂ ನಿಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

Manikarnika 6

ಬಳಿಕ ಕಂಗನಾ, ಮಣಿಕರ್ಣಿಕಾ ಸಂದರ್ಶನದ ಸಮಯದಲ್ಲಿ ನೀವು 3 ಗಂಟೆ ನನ್ನ ವ್ಯಾನ್‍ನಲ್ಲಿ ಇದ್ದು ನನ್ನ ಜೊತೆ ಊಟ ಮಾಡಿದ್ದೀರಿ. ಈ ವೇಳೆ ನಾನು ಸಂದರ್ಶನ ನೀಡಿದ್ದೆ. ಆದರು ನೀವು ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಕೆಟ್ಟದ್ದಾಗಿ ಬರೆದಿದ್ದೀರಾ. ನೀವು ನನಗೆ ವೈಯಕ್ತಿಕವಾಗಿ ಮೆಸೇಜ್ ಕೂಡ ಮಾಡಲು ಶುರು ಮಾಡಿದ್ದೀರಿ ಎಂದು ಪತ್ರಕರ್ತನ ವಿರುದ್ಧ ಆರೋಪಿಸಿದ್ದರು. ಈ ವೇಳೆ ಪತ್ರಕರ್ತ ಜಸ್ಟಿನ್ ನಾನು ನಿಮ್ಮ ವಿರುದ್ಧ ಕೆಟ್ಟದಾಗಿ ಸುದ್ದಿ ಮಾಡಿಲ್ಲ. ಅಲ್ಲದೆ ನಾನು ನಿಮ್ಮ ವ್ಯಾನಿನಲ್ಲಿ ಇದ್ದು, ನಿಮ್ಮ ಜೊತೆ ನಾನು ಊಟ ಕೂಡ ಮಾಡಿಲ್ಲ ಎಂದರೂ ಸಹ ಕಂಗನಾ ಅವರ ಮಾತನ್ನು ಕೇಳಲು ಒಪ್ಪಲಿಲ್ಲ.

Kangana Ranaut2

ಪತ್ರಕರ್ತ ಜಸ್ಟಿನ್ ಮಾತನಾಡಿ, ನಾನು ನಿಮ್ಮ ಜೊತೆ ಮೆಸೇಜ್ ಮಾಡಿದ್ದರೆ, ಆ ಟ್ವೀಟ್‍ಗಳು ಹಾಗೂ ಮೆಸೇಜ್‍ಗಳ ಸ್ಕ್ರೀನ್‍ಶಾಟ್ ತೋರಿಸಿ, ಆಗ ನಾನು ನಿಮ್ಮ ಆರೋಪಗಳನ್ನು ಒಪ್ಪುತ್ತೇನೆ ಎಂದರು. ಆಗ ಕಂಗನಾ ನಾನು ಸ್ಕ್ರೀನ್‍ಶಾಟ್‍ಗಳನ್ನು ತೋರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಇದಾದ ಬಳಿಕ ಕಂಗನಾ ಪತ್ರಕರ್ತ ಜಸ್ಟಿನ್‍ಗೆ ಕೆಟ್ಟ ಅಲೋಚನೆಯ ವ್ಯಕ್ತಿ ಎಂದು ಹೇಳಿ ಜಗಳ ಮಾಡಿದ್ದಾರೆ.

kangana ranuat

ಕಂಗನಾ ಹಾಗೂ ಪತ್ರಕರ್ತನ ಜಗಳ ಜೋರಾಗುತ್ತಿದ್ದಂತೆ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್, ನಟ ರಾಜ್‍ಕುಮಾರ್ ರಾವ್ ಹಾಗೂ ವೇದಿಕೆಯಲ್ಲಿ ಇದ್ದ ಎಲ್ಲರೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಆದರೆ ಕಂಗನಾ ಹಾಗೂ ಪತ್ರಕರ್ತ ಶಾಂತರಾಗಲು ಒಪ್ಪಲಿಲ್ಲ. ಇಬ್ಬರ ಜಗಳ ಜೋರಾಗಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

View this post on Instagram

 

A post shared by Viral Bhayani (@viralbhayani) on

Share This Article
Leave a Comment

Leave a Reply

Your email address will not be published. Required fields are marked *