-ಅದೃಷ್ಟದ ಕಾರಿನ ಮೊರೆ ಹೋದ ಸಿಎಂ
ಬೆಂಗಳೂರು: ಸರ್ಕಾರದ ಅಳಿವಿನಂಚಿನಲ್ಲಿರುವಾಗ ಸಿಎಂ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದಾರೆ.
ಸಿಎಂ ಮತ್ತು ದೇವೇಗೌಡರು ಮಾತುಕತೆ ನಡೆಸಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸ್ಪೀಕರ್ ಗೆ ಶಾಸಕರ ರಾಜೀನಾಮೆ ವಿಚಾರವಾಗಿ ದೂರು ನೀಡುವುದು, ಕಾಂಗ್ರೆಸ್ ಶಾಸಕಾಂಗ (ಸಿಎಲ್‍ಪಿ) ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರ ನಡೆ ಬಗ್ಗೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೆ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಿದರೆ ಏನು ಮಾಡಬಹುದು ಎಂಬುದರ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಅವರು ಡಿಜಿ ಮತ್ತು ಐಜಿ ಜೊತೆಗೂ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅದೃಷ್ಟದ ಕಾರು:
ಇತ್ತ ಸರ್ಕಾರ ಅಳಿವಿನಂಚಿನಲ್ಲಿರುವಾಗ ಸಿಎಂ ಅದೃಷ್ಟದ ಕಾರಿನ ಮೊರೆ ಹೋಗಿದ್ದು, ತಮ್ಮ ಅದೃಷ್ಟದ ಬ್ಲ್ಯಾಕ್ ರೇಂಜ್ ರೋವರ್ ಕಾರಿನಲ್ಲಿ ಸಿಎಂ ಓಡಾಟ ನಡೆಸುತ್ತಿದ್ದಾರೆ. ರೇಂಜ್ ರೋವರ್ ರಿಪೇರಿಗೆ ಹೋಗಿದ್ದರಿಂದ ಸಿಎಂ ಬೇರೆ ಕಾರು ಬಳಸುತ್ತಿದ್ದರು. ಇಂದು ಸಿಎಂ ಜೆಪಿನಗರದ ಮನೆಯಿಂದ ಬ್ಲಾಕ್ ರೇಂಜ್ ರೋವರ್ ಕಾರಿನಲ್ಲಿ ಹೊರಟಿದ್ದಾರೆ.