ಸತ್ತ ತಾಯಿಯನ್ನು ಎಬ್ಬಿಸುತ್ತಿರುವ ಘೇಂಡಾಮೃಗ ಮರಿ: ವಿಡಿಯೋ ನೋಡಿ

Public TV
1 Min Read
baby rhino

ಬೆಂಗಳೂರು: ಘೇಂಡಾಮೃಗದ ಮರಿಯೊಂದು ಮೃತಪಟ್ಟು ಕೆಳಗೆ ಬಿದ್ದಿದ್ದ ತನ್ನ ತಾಯಿಯನ್ನು ಎಬ್ಬಿಸುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರವೀಣ್ ಕಾಸವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ “ಕಳ್ಳ ಬೇಟೆಗಾರರ ಗುಂಡಿಗೆ ಬಲಿಯಾದ ತಾಯಿಯನ್ನು ಘೇಂಡಾಮೃಗ ಮರಿ ಎಬ್ಬಿಸಲು ಪ್ರಯತ್ನ ಮಾಡುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

baby rhino 1

ಪ್ರವೀಣ್ ಅವರ ಪ್ರಕಾರ, ಕಳ್ಳ ಬೇಟೆಗಾರರು ಘೇಂಡಾಮೃಗದ ಕೊಂಬು ಕೀಳಲು ಅದನ್ನು ಹೊಡೆದು ಸಾಯಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಘೇಂಡಾಮೃಗ ಮರಿ ನೆಲದ ಮೇಲೆ ಬಿದ್ದಿದ್ದ ತನ್ನ ತಾಯಿಯನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ನೋಡುಗರಿಗೆ ಕಣ್ಣೀರು ತರಿಸುವಂತಿದೆ.

ಈ ವೈರಲ್ ವಿಡಿಯೋಗೆ ಇದುವರೆಗೂ 35 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದೆ. ಅಲ್ಲದೆ ಸಾಕಷ್ಟು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ಕೆಲವರು ಕಳ್ಳ ಬೇಟೆಗಾರರು ವಿರುದ್ಧ ಆಕ್ರೋಶ ಹೊರ ಹಾಕಿದರೆ, ಮತ್ತೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂತರಾಷ್ಟ್ರೀಯ ಪತ್ರಿಕೆ ಪ್ರಕಾರ, ಈ ಘಟನೆ ಫಬ್ರವರಿ 2018ರಂದು ದಕ್ಷಿಣ ಆಫ್ರಿಕಾ ನಡೆದಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಆ ಘೇಂಡಾಮೃಗದ ಮರಿಯನ್ನು ಶಾಂತಗೊಳಿಸಿದ್ದರು. ಬಳಿಕ ಘೇಂಡಾಮೃಗವನ್ನು ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಸಿಬ್ಬಂದಿ ಘೇಂಡಾಮೃಗ ಮರಿಗೆ ಷಾರ್ಲೆಟ್ ಎಂದು ಹೆಸರಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *