ಯಾದಗಿರಿ: ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನನ್ನು, ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ ಇಂದು ನಡೆದಿದೆ.
ಹಾಡಹಗಲೇ ನಗರದ ಹೊಸಹಳ್ಳಿ ಕ್ರಾಸಿನ ಹನುಮಂತ ದೇವಾಲಯದ ಬಳಿಯ, ಮನೆಯೊಂದರಲ್ಲಿ ಕಳ್ಳನೊಬ್ಬ ಆಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ. ಈ ವೇಳೆ ಕಳ್ಳ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾನೆ.
ಕಳ್ಳನ ಚಲನವಲನ ಕಂಡು ಅನುಮಾನಗೊಂಡ ಸ್ಥಳೀಯರು, ಹಿಡಿದು ಥಳಿಸಿದಾಗ ಮನೆ ಕಳ್ಳತನ ವಿಚಾರವನ್ನು ಕಳ್ಳ ಬಾಯಿ ಬಿಟ್ಟಿದ್ದಾನೆ. ಇನ್ನೂ ಸಿಕ್ಕ ಕಳ್ಳನನ್ನು ಮನಬಂದಂತೆ ಥಳಿಸಿದ ಸ್ಥಳೀಯರು ನಂತರ ಆತನನ್ನು ನಗರದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳನನ್ನು ವಿಚಾರಣೆ ನಡೆಸುತ್ತಿದ್ದಾರೆ.