ಪಣಜಿ: ಹಸುವೊಂದು ಯುವಕರ ಜೊತೆ ಫುಟ್‍ಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ಈ ವಿಡಿಯೋ ಗೋವಾದಲ್ಲಿ ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಯುವಕರು ಮೈದಾನದಲ್ಲಿ ಫುಟ್‍ಬಾಲ್ ಆಡುತ್ತಿದ್ದರು. ಈ ವೇಳೆ ಹಸು ಮೈದಾನದ ಮಧ್ಯೆ ಬಂದಿದೆ. ಹಸು ಕಾಲಿನಲ್ಲಿ ಬಾಲ್ ಹಿಡಿದು ಯುವಕರಿಗೆ ಚಮಕ್ ಕೊಟ್ಟಿದೆ.
ಹಸು ಬಾಲನ್ನು ಕಾಯುತ್ತಾ ಅಲ್ಲಿಯೇ ನಿಂತಿದೆ. ಬಾಲನ್ನು ಪಡೆಯುಲು ಯುವಕರು ಯಾರೂ ಹಸುವಿನ ಬಳಿ ಹೋಗುವ ಧೈರ್ಯ ಮಾಡಲಿಲ್ಲ. ನಂತರ ಹಸುವೇ ಬಾಲನ್ನು ತಳ್ಳಿಕೊಂಡು ಮುಂದಕ್ಕೆ ಹೋಗಿದೆ. ಈ ವೇಳೆ ಯುವಕನೊಬ್ಬ ಆ ಬಾಲ್ ವಾಪಸ್ ತೆಗೆದುಕೊಂಡು ಬರಲು ಹೋದಾಗ ಹಸು ಬಾಲ್ ನೀಡಲು ನಿರಾಕರಿಸಿದೆ.
ಹಸುವಿನ ಈ ವರ್ತನೆ ನೋಡಿ ಯುವಕರು ನಗಲು ಶುರು ಮಾಡಿದ್ದಾರೆ. ಈ ವೇಳೆ ಮತ್ತೊಬ್ಬ ಯುವಕನೊಬ್ಬ ಧೈರ್ಯ ಮಾಡಿ ಹಸುವಿನ ಬಳಿ ಹೋಗಿ ಬಾಲನ್ನು ಒದ್ದಿದ್ದಾನೆ. ಬಾಲ್ ಒದ್ದಿದ್ದನ್ನು ನೋಡಿದ ಹಸು ಆತನನ್ನು ಬೆನ್ನಟ್ಟಿದೆ. ನಂತರ ಯುವಕರು ಆ ಕಡೆಯಿಂದ ಈ ಕಡೆ ಬಾಲ್ ಪಾಸ್ ಮಾಡುತ್ತಿದ್ದಾಗಲೂ ಹಸು ಮಧ್ಯದಲ್ಲಿ ನಿಂತು ಬಾಲ್ ಹಿಡಿಯಲು ಓಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.youtube.com/watch?time_continue=94&v=_gvjjsCQ_Rw