ವೇಶ್ಯಾವಾಟಿಕೆಯ ಸ್ಪಾ ಸೆಂಟರ್‌ಗಳ ಮೇಲೆ ದಾಳಿ- ವಿದೇಶಿಗರು ಸೇರಿ 35 ಜನರ ಬಂಧನ

Public TV
1 Min Read
spa

ನೊಯ್ಡಾ: ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಸ್ಪಾ ಸೆಂಟರ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ 25 ಮಹಿಳೆಯರೂ ಸೇರಿದಂತೆ ಒಟ್ಟು 35 ಜನರನ್ನು ನೊ0ಯ್ಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಥೈಲ್ಯಾಂಡ್‍ನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

spa 2

ದಾಳಿಯಲ್ಲಿ 25 ಮಹಿಳೆಯರು ಹಾಗೂ 10 ಪುರುಷರು ಸೇರಿದಂತೆ ಒಟ್ಟು 35 ಜನರನ್ನು ಬಂಧಿಸಲಾಗಿದ್ದು, ಒಂದು ಲಕ್ಷ ರೂ. ನಗದು, ಬೀಯರ್, ಕಾಂಡೋಮ್‍ಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 14 ಸ್ಪಾ ಸೆಂಟರ್ ಗಳ ಪೈಕಿ ಮೂರು ಸೆಂಟರ್ ನಲ್ಲಿ ಸೆಕ್ಸ್ ರ್ಯಾಕೆಟ್ ದಂಧೆ ನಡೆಸಲಾಗುತ್ತಿತ್ತು. ಉಳಿದ 11 ಸೆಂಟರ್ ಗಳು ನಿಯಮಗಳನ್ನು ಉಲ್ಲಂಘಿಸಿವೆ.

ಹಿರಿಯ ಎಸ್‍ಪಿ ವೈಭವ್ ಕೃಷ್ಣಾ ಅವರ ನೇತೃತ್ವದಲ್ಲಿ ಮಹಿಳಾ ಪೇದೆಗಳು ಸೇರಿದಂತೆ ಪೊಲೀಸರು ಸಂಜೆ ಸೆಕ್ಟರ್ 18ರ ಕಮರ್ಶಿಯಲ್ ಹಬ್ ಬಳಿಯ 14 ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲಾಗಿತ್ತು. 14 ಜನ ಪೊಲೀಸರ ತಂಡದಲ್ಲಿ 7 ಸರ್ಕಲ್ ಇನ್ಸ್‍ಪೆಕ್ಟರ್, 8 ಸ್ಟೇಷನ್ ಹೌಸ್ ಅಧಿಕಾರಿಗಳು, 30 ಸಬ್ ಇನ್ಸ್‍ಪೆಕ್ಟರ್ಸ್ ಹಾಗೂ ಪೇದೆಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಗೌತಮ ಬುದ್ಧ ನಗರದ ಎಸ್‍ಪಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *