ಸೂರ್ಯಗ್ರಹಣ- ದ್ವಾದಶ ರಾಶಿಗಳ ಫಲಾಫಲ ಹೇಗಿದೆ?

Public TV
2 Min Read
GRAHANA HOROSCOPE copy

ಜುಲೈ 2 ರಂದು ನಭೋಮಂಡಲ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಸೂರ್ಯಗ್ರಹಣ ಕೇವಲ ನಭೋಮಂಡದಲ್ಲಿ ಜರಗುವ ಒಂದು ವಿದ್ಯಮಾನ ಎಂದು ಖಗೋಳ ತಜ್ಞರು ಹೇಳುತ್ತಾರೆ. ಸೂರ್ಯ ಗ್ರಹಣ ಎನ್ನುವುದು ಭೌಗೋಳಿಕವಾಗಿ ಒಂದು ವಿದ್ಯಮಾನ ಎನಿಸಿಕೊಂಡರೂ ಧಾರ್ಮಿಕವಾಗಿ ಅವುಗಳನ್ನು ಸೂತಕ ಅಥವಾ ಋಣಾತ್ಮಕ ಎನ್ನುವ ರೀತಿಯಲ್ಲಿ ಪರಿಗಣಿಸಲಾಗುತ್ತದೆ.

ಇದೇ ಜುಲೈ 2ರಂದು ಸೂರ್ಯಗ್ರಹಣ ಸಂಭವಿಸಲಿದೆ. ತಿಂಗಳ ಪ್ರಾರಂಭದಲ್ಲೇ ಸಂಭವಿಸುವ ಈ ಸೂರ್ಯ ಗ್ರಹಣವು ಒಟ್ಟು 4 ನಿಮಿಷ 33 ಸೆಕೆಂಡ್‍ಗಳ ಕಾಲ ಸಂಭವಿಸಲಿದೆ. ಕೊನೆಯದಾಗಿ 2017ರ ಆಗಸ್ಟ್ ನಲ್ಲಿ 2 ನಿಮಿಷ 40 ಸೆಕೆಂಡ್‍ಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಆಗಿತ್ತು. ಈ ವರ್ಷದ ಏಕೈಕ ಪೂರ್ಣ ಸೂರ್ಯ ಗ್ರಹಣ ಇದಾಗಿದೆ.

Soorya Grahana 1

ಜುಲೈ 2ರ ದ್ವಾದಶ ರಾಶಿಗಳು ಫಲಾಫಲ

ಮೇಷ: ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆ, ಅನಾರೋಗ್ಯ, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ಉದ್ಯೋಗದಲ್ಲಿ ಕಿರಿಕಿರಿ.

ವೃಷಭ: ದಾಯಾದಿ ಕಲಹಗಳು ಹೆಚ್ಚು, ಹಣಕಾಸಿನ ವಿಚಾರದಲ್ಲಿ ತಪ್ಪು ನಿರ್ಧಾರಗಳು, ಅಜಾಗರೂಕತೆ, ನೋವನ್ನ ಅನುಭವಿಸಬೇಕಾಗುತ್ತದೆ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ವಾಹನ ಚಾಲನೆಯಲ್ಲಿ ಎಚ್ಚರ

ಮಿಥುನ: ಬಹಳ ಜಾಗ್ರತೆಯಾಗಿರಬೇಕು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ, ದಾಂಪತ್ಯ ವಿಯೋಗ ಸಾಧ್ಯತೆ, ಉದ್ಯೋಗ ನಷ್ಟ ಸಾಧ್ಯತೆ. ಧನ ನಷ್ಟ.

ಕಟಕ: ದುಃಸ್ವಪ್ನ, ನಿದ್ರಾಭಂಗ, ಅನಿರೀಕ್ಷಿತ ನಷ್ಟ, ದೃಷ್ಟಿದೋಷ ಹೆಚ್ಚಾಗುವ ಸಾಧ್ಯತೆ.

solar eclipse

ಸಿಂಹ: ಆರೋಗ್ಯ ಹಳಿತಪ್ಪುವ ಸಾಧ್ಯತೆ, ಲಾಭವನ್ನ ಉಳಿಸಿಕೊಳ್ಳುವಲ್ಲಿ ಎಡವುವ ಸಂದರ್ಭಮ ಮಕ್ಕಳ ಜೀವನದಲ್ಲಿ ಏರುಪೇರು, ಸಂಗಾತಿಯಿಂದ ಮಾನಹಾನಿ.

ಕನ್ಯಾ: ಹಿಂದೆ ಮಾಡಿದ ತಪ್ಪುಗಳು ಈಗ ಕಾಡಲಿವೆ, ಉದ್ಯೋಗದಲ್ಲಿ ಒತ್ತಡ, ಪ್ರಯಾಣ, ಸಾಲು ಸಾಲು ಸೋಲುಗಳಿಂದ ಜೀವನದ ಮೇಲೆ ಜಿಗುಪ್ಸೆ.

ತುಲಾ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಕಿರಿಕಿರಿ, ಆತ್ಮ ಸಂಕಟ ಕಾಡುವ ಸಾಧ್ಯತೆ.

ವೃಶ್ಚಿಕ: ಆಕಸ್ಮಿಕ ಅವಘಡಗಳು ನಡೆಯುವ ಸಾಧ್ಯತೆ, ಮುಖ್ಯ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ತಾಯಿ ಆರೋಗ್ಯದಲ್ಲಿ ವ್ಯತ್ಯಯ.

ಧನಸ್ಸು: ಆಲಸ್ಯ, ಬೇಸರ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಸೋಲು, ಅನಿರೀಕ್ಷಿತ ಸಾಲ.

solar

ಮಕರ: ಶತ್ರು ಕಾಟ ಹೆಚ್ಚು, ನಷ್ಟವನ್ನ ಅನುಭವಿಸಬೇಕಾಗುತ್ತದೆ, ಸುಸ್ತು, ತಲೆನೋವು.

ಕುಂಭ: ಮಕ್ಕಳಿಂದ ನೋವು ಅನುಭವಿಸಬೇಕಾಗುತ್ತದೆ. ಭಾವನೆಗಳಿಗೆ ಪೆಟ್ಟು ಬೀಳುವ ಸಾಧ್ಯತೆ. ಅನಮಾನಗಳನ್ನು ಎದುರಿಸಬೇಕಾಗುತ್ತದೆ.

ಮೀನ: ಮಾನಸಿಕ ತೊಳಲಾಟ, ಆತಂಕ ಹೆಚ್ಚಾಗಿರುತ್ತದೆ. ಧ್ವಂದ ಮನಃಸ್ಥಿತಿ ಕಾಡುತ್ತದೆ.

Share This Article
Leave a Comment

Leave a Reply

Your email address will not be published. Required fields are marked *