ಜುಲೈನಲ್ಲಿ ಡಬಲ್ ಗ್ರಹಣ

Public TV
2 Min Read
solar eclipse

ಬೆಂಗಳೂರು: ಬಾಹ್ಯಾಕಾಶದ ವಿದ್ಯಮಾನ ಜನರಲ್ಲಿ ಆತಂಕವನ್ನ ಹೆಚ್ಚು ಮಾಡಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಭೂಮಿ ಮೇಲೆ ನೆಡೆಯುತ್ತಿರೋ ಎಲ್ಲಾ ಅವಘಡಗಳಿಗೂ ನಭೋಮಂಡಲದಲ್ಲಿ ಜರುಗಲಿರೋ ಗ್ರಹಣ ಪ್ರಕ್ರಿಯೆಗೂ ಸಂಬಂಧ ಇದೆ ಅನ್ನೋದೇ ಭೀತಿಯನ್ನ ಹೆಚ್ಚು ಮಾಡಿದೆ. ಜುಲೈನಲ್ಲಿ ಒಂದು ಸೂರ್ಯ ಗ್ರಹಣ, ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ. 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳಿಗೆ ನಭೋಮಂಡಲ ಸಾಕ್ಷಿಯಾಗಲಿದೆ.

Soorya Grahana 1

ಸೂರ್ಯ ಗ್ರಹಣ:
ಜುಲೈ 2ರಂದು ಸೂರ್ಯಗ್ರಹಣ ಸಂಭವಿಸಲಿದೆ. ತಿಂಗಳ ಪ್ರಾರಂಭದಲ್ಲೇ ಸಂಭವಿಸುವ ಈ ಸೂರ್ಯ ಗ್ರಹಣವು ಒಟ್ಟು 4 ನಿಮಿಷ 33 ಸೆಕೆಂಡ್‍ಗಳ ಕಾಲ ಸಂಭವಿಸಲಿದೆ. ಕೊನೆಯದಾಗಿ 2017ರ ಆಗಸ್ಟ್ ನಲ್ಲಿ 2 ನಿಮಿಷ 40 ಸೆಕೆಂಡ್‍ಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಆಗಿತ್ತು. ಈ ವರ್ಷದ ಏಕೈಕ ಪೂರ್ಣ ಸೂರ್ಯ ಗ್ರಹಣ ಇದಾಗಿದೆ.

ದಕ್ಷಿಣ ಪೆಸಿಫಿಕ್ ಸಾಗರ, ಚಿಲಿ ಮತ್ತು ಅರ್ಜೆಂಟಿನಾದಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣವು ಗೋಚರವಾಗಲಿದೆ. ದಕ್ಷಿಣ ಅಮೆರಿಕ ಸೇರಿದಂತೆ ಇತರ ಭಾಗಗಳಲ್ಲಿ ಭಾಗಶಃ ಗ್ರಹಣವು ಗೋಚರವಾಗುವ ಸಾಧ್ಯತೆಯಿದೆ. ಪೂರ್ಣ ಸೂರ್ಯಗ್ರಹಣ ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ ಸಂಭವಿಸಲಿದೆ. ಗ್ರಹಣದ ಮೊದಲ ಒಹಿನೋ ದ್ವೀಪದಲ್ಲಿ ಸ್ಥಳೀಯ ಕಾಲಮಾನ 10.24ಕ್ಕೆ ಆರಂಭವಾಗುತ್ತದೆ. ನಂತರ ಆಗ್ನೇಯದ ಕಡೆಗೆ ಸಾಗಲಿದೆ.

Soorya Grahana

ದಕ್ಷಿಣ ಅಮೆರಿಕಾದ ಒಹಿನೋ ದ್ವೀಪದಲ್ಲಿ ಈ ಗ್ರಹಣ ಮೊದಲು ಗೋಚರವಾಗಲಿದೆ. ಖಗೋಳ ಶಾಸ್ತ್ರಜ್ಞರ ಪ್ರಕಾರ ಇಲ್ಲಿ ಸುಮಾರು 2 ನಿಮಿಷ 53 ಸೆಕೆಂಡ ಕಾಣಿಸಿಕೊಳ್ಳಲಿದೆ ಎಂದು ಅಂದಾಜಿಸಿದ್ದಾರೆ. ಆದಾದ ಬಳಿಕ ಗಲಪೊಗಾಸ್ ದ್ವೀಪದಲ್ಲಿ ಗ್ರಹಣ ಗೋಚರ ಕೊನೆಯಾಗಲಿದೆ. ಇಲ್ಲಿ ಸುಮಾರು 4 ನಿಮಿಷ 23 ಸೆಕೆಂಡ್ ಸಮಯದಷ್ಟು ಗ್ರಹಣ ಕಾಣಿಸಿಕೊಳ್ಳಲಿದೆ. ಈ ಮಧ್ಯೆ ಚಿಲಿ, ಅರ್ಜೆಂಟಿನಾದಂಥಾ ದೇಶಗಳಿಗೂ ಅಲ್ಪ ಸ್ವಲ್ಪ ದರ್ಶನ ಸೂರ್ಯಗ್ರಹಣ ನೀಡಲಿದೆ.

ಚಂದ್ರ ಗ್ರಹಣ:
ಜುಲೈ 17ರಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿಯೂ ಗೋಚರವಾಗಲಿದೆ. ಭಾರತದಲ್ಲಿಯೂ ಜುಲೈ 17 ಅಂದ್ರೆ 16ರ ಮಧ್ಯ ರಾತ್ರಿ ಸುಮಾರು 1.51 ನಿಮಿಷದ ಆಸುಪಾಸಿನಲ್ಲಿ ಗ್ರಹಣ ಗೋಚರಿಸಲಿದೆ.

lunar eclipse

ಏಷ್ಯಾ, ಯುರೋಪ್ ರಾಷ್ಟ್ರಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣ ಗೋಚರವಾಗಲಿದೆ. ಉಳಿದಂತೆ ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ/ಈಶಾನ್ಯ ಅಮೆರಿಕಾ, ಪೆಸಿಫಿಕ್, ಅಂಟ್ಲಾಟಿಕ್, ಭಾರತದ ಸಾಗರಗಳಲ್ಲಿಯೂ ಚಂದ್ರ ಗ್ರಹಣ ಕಾಣಬಹುದಾಗಿದೆ. ಬೆಂಗಳೂರಲ್ಲಿ ಜುಲೈ 16ರ ಮಧ್ಯರಾತ್ರಿ (ಜುಲೈ 17) 1.51ಕ್ಕೆ ಆರಂಭಗೊಂಡು ಬೆಳಗಿನ ಜಾವ 5 ಗಂಟೆ 47 ನಿಮಿಷಕ್ಕೆ ಕೊನೆಯಾಗಲಿದೆ. ಒಂದು ವೇಳೆ ಆಕಾಶವು ಮೋಡಗಳಿಂದ ಕೂಡಿದ್ರೆ ಚಂದ್ರಗ್ರಹಣ ದರ್ಶನ ಸಿಗಲಾರದು.

Share This Article
Leave a Comment

Leave a Reply

Your email address will not be published. Required fields are marked *