ಬ್ರಿಟನ್‍ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‍ಗೆ ಸ್ಥಾನ

Public TV
2 Min Read
Nirmala Sitharaman

ಲಂಡನ್: ಬ್ರಿಟನ್-ಇಂಡಿಯಾ ಸಂಬಂಧವನ್ನು ಮುನ್ನಡೆಸುತ್ತಿರುವ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ಸೋಮವಾರ, ಭಾರತ ದಿನಾಚರಣೆ ಅಂಗವಾಗಿ ಬ್ರಿಟನ್ ಗೃಹ ಸಚಿವ ಸಾಜಿದ್ ಜಾವಿದ್ ಅವರು ಲಂಡನ್ ಸಂಸತ್ತಿನಲ್ಲಿ ಈ ಬಗ್ಗೆ ತಿಳಿಸಿದರು. ಬ್ರಿಟನ್ ಮತ್ತು ಭಾರತ ನಡುವಿನ ಉತ್ತಮ ಸ್ನೇಹ ಸಂಬಂಧವನ್ನು ವೃದ್ಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ 100 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಈ ಪಟ್ಟಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್, ಯುಕೆಗೆ ಭಾರತೀಯ ಹೈಕಮಿಷನರ್ ಆಗಿರುವ ರುಚಿ ಘನಶಾಂ ಹಾಗೂ ಬ್ರಿಟನ್‍ನ ರಕ್ಷಣಾ ರಾಜ್ಯ ಕಾರ್ಯದರ್ಶಿ ಪೆನ್ನಿ ಮೊರಾಡೌಂಟ್ ಕೂಡ ಸ್ಥಾನ ಗಳಿಸಿಕೊಂಡಿದ್ದಾರೆ.

Nirmala Sitharaman 1

ಈ ಹಿಂದೆ ನಿರ್ಮಲಾ ಸೀತಾರಾಮನ್ ಕೇಂದ್ರ ರಕ್ಷಣಾ ಮಂತ್ರಿಯಾಗಿದ್ದಾಗ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಲಂಡನ್‍ನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ ನಿರ್ಮಲಾ ಸೀತಾರಾಮನ್ ಈ ಹಿಂದೆ ಯುಕೆಯಲ್ಲಿ ಕೆಲಸ ಮಾಡಿದ್ದರು.

Penny Mordaunt

ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಉತ್ಪನ್ನಗಳ ಆಮದುದಾರನಾಗಿ ಮತ್ತು ಯುಕೆಗೆ ಮಹತ್ವದ ಕಾರ್ಯತಂತ್ರದ ಪಾಲುದಾರನಾಗಿ ಹೊರಹೊಮ್ಮುತ್ತಿದ್ದು, ಯುಕೆ-ಇಂಡಿಯಾ ಸಂಬಂಧದಲ್ಲಿ ಪೆನ್ನಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಆದ್ದರಿಂದ ಇವರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಗಟ್ಟಿಸಿಕೊಂಡಿದ್ದಾರೆ.

ruchi ghanashyam

ಈ ಬಗ್ಗೆ ಮಾತನಾಡಿದ ರುಚಿ ಘನಶ್ಯಾಂ ಅವರು, ಈ ಪಟ್ಟಿಯು ಯುಕೆ ಮತ್ತು ಭಾರತದ ಭವಿಷ್ಯದ ಮಹತ್ತರ ಸಾಮಥ್ರ್ಯವನ್ನು ಎತ್ತಿ ತೋರಿಸುತ್ತದೆ. ಏಕೆಂದರೆ ಈ ಎರಡು ರಾಷ್ಟ್ರಗಳು ಒಟ್ಟಾಗಿ ಮುಂದುವರಿಯುತ್ತಿದೆ. ವ್ಯವಹಾರದಿಂದ ರಾಜಕೀಯಕ್ಕೆ, ಮತ್ತು ಕಲೆ ಮತ್ತು ಸಾಕ್ಷರತೆಗೆ, ಸಹಯೋಗ ಮತ್ತು ಸಂಬಂಧಗಳ ಮೂಲಕ ಮಹಿಳೆಯರು ಈ ದಿಟ್ಟ ಪಾಲುದಾರಿಕೆಯನ್ನು ಒಟ್ಟುಗೂಡಿಸಲು ದಾರಿ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು.

uk india

ರಾಜಕೀಯ, ತಂತ್ರಜ್ಞಾನ ಮತ್ತು ಸುಸ್ಥಿರತೆ ಸೇರಿದಂತೆ 11 ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

uk india 1

ಇದಲ್ಲದೆ ಈ ಪಟ್ಟಿಯಲ್ಲಿ ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್ ಮತ್ತು ಬ್ಯಾರನೆಸ್ ಸ್ಯಾಂಡಿ ವರ್ಮಾ, ಚಲನಚಿತ್ರ ನಿರ್ಮಾಪಕಿಯಾದ ಗುರುಂದರ್ ಚಾಧಾ, ಭಾರತೀಯ ಕಾನೂನು ಸಂಸ್ಥೆಯ ಮುಖ್ಯಸ್ಥೆ ಜಿಯಾ ಮೂಡಿ, ಪಲ್ಲವಿ ಎಸ್ ಶಾರ್ಫ್ ಮತ್ತು ಅಪೋಲೊ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸುನಿತಾ ರೆಡ್ಡಿ ಮತ್ತು ನಾಸ್ಕಾಂ ಅಧ್ಯಕ್ಷೆ ದೇಬಾಜ್ಞಿ ಘೋಷ್ ಹೆಸರುಗಳು ಕೂಡ ಸೇರಿದೆ.

Share This Article
Leave a Comment

Leave a Reply

Your email address will not be published. Required fields are marked *