ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನ ದತ್ತು ಪಡೆದ ನಿರ್ಮಾಪಕ

Public TV
1 Min Read
baby 3

ಜೈಪುರ್: ರಾಜಸ್ಥಾನದಲ್ಲಿ ಆಗ ತಾನೇ ಹುಟ್ಟಿದ ಹೆಣ್ಣು ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದರು. ಇದೀಗ ಆ ಮಗುವನ್ನು ಚಲನಚಿತ್ರ ನಿರ್ಮಾಪಕರೊಬ್ಬರು ದತ್ತು ಪಡೆದಿದ್ದಾರೆ.

ಬಾಲಿವುಡ್ ನಿರ್ಮಾಪಕ ವಿನೋದ್ ಕಾಪ್ರಿ ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಕಸದ ತೊಟ್ಟಿಯಲ್ಲಿ ಮಗು ಪತ್ತೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಗಮನಿಸಿದ ವಿನೋದ್ ಕಾಪ್ರಿ ಅವರು ಮಗುವನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿನೋದ್ ಅವರು ತಮ್ಮ ಕೊನೆಯ ಸಿನಿಮಾ ‘ಪಿಹು’ ಟೈಟಲ್ ಅನ್ನೇ ಮಗುವಿಗೆ ಹೆಸರಿಟ್ಟಿದ್ದಾರೆ.

ಇದೀಗ ನಾವು ಪುಟ್ಟ ದೇವತೆ ಪ್ರೀತಿಯಲ್ಲಿ ಬಿದ್ದಿದ್ದೇವೆ. ಮುಂದೆ ಮಾಡುವುದು ಬಹಳಷ್ಟಿದೆ. ಸದ್ಯಕ್ಕೆ ದತ್ತು ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಮಗು ನಮ್ಮ ಮನೆಗೆ ಬರುವವರೆಗೂ ಇದರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಮಗು ಕೇವಲ 1.6 ಕಿಲೋಗ್ರಾಂ ತೂಕವಿತ್ತು ಮತ್ತು ಆಸ್ಪತ್ರೆಗೆ ದಾಖಲಾದಾಗ ಉಸಿರಾಡಲು ಸಮಸ್ಯೆಯಿತ್ತು. ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ವಿನೋದ್ ಹೇಳಿದ್ದಾರೆ.

ಅಪ್ಪಂದಿರ ದಿನದಂದು ಮಗುವಿನ ವೀಡಿಯೊವನ್ನು ವಿನೋದ್ ಹಂಚಿಕೊಂಡಿದ್ದು, ವಿಡಿಯೋದಲ್ಲಿ ವಿನೋದ್ ಮಗವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ರಾಜಸ್ಥಾನದ ನಾಗೌರ್ ದಲ್ಲಿ ಆಗ ತಾನೇ ಹುಟ್ಟಿದ ಮಗವನ್ನು ಕಸದ ತೊಟ್ಟಿಯಲ್ಲಿ ಬಿಟ್ಟುಹೋಗಿದ್ದರು. ಮಗು ಒಂದೇ ಸಮನೆ ಅಳುತ್ತಿದ್ದ ಧ್ವನಿ ಕೇಳಿದ ಸ್ಥಳೀಯರು ಮಗವನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿತ್ತು.

ವಿಡಿಯೋವನ್ನು ನೋಡಿದ ವಿನೋದ್ ಕಾಪ್ರಿ ತಕ್ಷಣ ಆಸ್ಪತ್ರೆಗೆ ಹೋಗಿ ಹೆಣ್ಣುಮಗುವನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಸದ್ಯಕ್ಕೆ ವಿನೋದ್ ಕಾಪ್ರಿ ‘155 Hours’  ಎಂಬ ಚಿತ್ರವನ್ನು ಮಾಡುವುದಾಗಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *