ಬೆಂಗಳೂರು: ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಯುವಕ ಮೃತಪಟ್ಟ ಪ್ರಕರಣದ ವಿಚಾರವಾಗಿ ಮೃತನ ಮಾವ ಸ್ಪಷ್ಟನೆ ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತನಾಡಿದ ಮಂಜುನಾಥ್ ಅವರು, ಕುಮಾರ್ ಟಿಕ್‍ಟಾಕ್ ಮಾಡಲು ಹೋಗಿ ಸಾವನ್ನಪ್ಪಿಲ್ಲ. ಕುಮಾರ್ ತುಮಕೂರಿನ ರಾಮು ಮೆಲೋಡೀಸ್ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ. ಬಿಡುವಿನ ವೇಳೆ ಸರ್ಕಾರಿ ಮತ್ತು ಬಡ ಶಾಲೆಗಳಲ್ಲಿ ನೃತ್ಯ ಹೇಳಿಕೊಡುತ್ತಿದ್ದ. ಹೊಸ ಹೊಸ ಸ್ಟಂಟ್‍ಗಳನ್ನು ಕಲಿತರೆ ಸಿನಿಮಾ ಹಾಗೂ ಕಾರ್ಯಕ್ರಮಗಳಿಗೆ ಅವಕಾಶ ಸಿಗುತ್ತವೆ ಎಂದು ತಿಳಿಸಿದ್ದ ಎಂದು ಪ್ರತಿಕ್ರಿಯಿಸಿದ್ದಾರೆ.
ಕುಮಾರ್ ತಂದೆ ತಾಯಿ ಜೊತೆ ವಾಸವಿದ್ದ. ತಂಗಿಗೆ ಮದುವೆಯಾಗಿದೆ. ಅವರು ತುಂಬಾ ಬಡವರು. ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಕುಮಾರ್ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಯಾರೋಬ್ಬರು ಕುಮಾರ್ ನೆರವಿಗೆ ಬರುತ್ತಿಲ್ಲ. ಟಿಕ್‍ಟ್ಯಾಕ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನುವುದು ಶುದ್ಧ ಸುಳ್ಳು ಎಂದು ಮಂಜುನಾಥ್ ಹೇಳಿದ್ದಾರೆ.
ಆಗಿದ್ದೇನು?:
ಜೂನ್ 15ರಂದು ಕುಮಾರ್ ಸ್ನೇಹಿತನ ಜೊತೆಯಲ್ಲಿ ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದ. ಬಿದ್ದ ರಭಸಕ್ಕೆ ತಲೆ ಮೂಳೆ ಮತ್ತು ಬೆನ್ನು ಮೂಳೆಗಳು ಮುರಿದಿತ್ತು. ತಕ್ಷಣವೇ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]