ಸಚಿನ್ ಅಪರೂಪದ ದಾಖಲೆಯನ್ನ ಮುರಿಯುತ್ತಾರ ರೋಹಿತ್ ಶರ್ಮಾ?

Public TV
2 Min Read
rohit sachin 1

ಮುಂಬೈ: 2019ರ ವಿಶ್ವಕಪ್ ಕ್ರಿಕೆಟ್‍ನ ಎರಡು ದಿನಗಳ ಅವಧಿಯಲ್ಲಿ ಎರಡು ಪ್ರಮುಖ ವಿಶ್ವ ದಾಖಲೆಗಳನ್ನು ಮುರಿಯಲಾಗಿತ್ತು. ಸದ್ಯ ಸಚಿನ್ ವಿಶ್ವಕಪ್ ದಾಖಲೆಯನ್ನು ಮುರಿಯುವ ಅವಕಾಶವನ್ನು ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೊಂದಿದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚು ಅನುಕೂಲವಾಗಿದ್ದು, ರನ್‍ಗಳು ಹೆಚ್ಚು ಹರಿದು ಬರುತ್ತಿದೆ. ಪರಿಣಾಮ 2003ರ ವಿಶ್ವಕಪ್ ಟೂರ್ನಿಯಲ್ಲಿ 673 ರನ್ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

David Warner

2003ರ ಬಳಿಕ ಮೂರು ವಿಶ್ವಕಪ್ ಟೂರ್ನಿ ನಡೆದರೂ ಈ ದಾಖಲೆಯನ್ನು ಸರಿಗಟ್ಟಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಆಸೀಸ್‍ನ ಡೇವಿಡ್ ವಾರ್ನರ್ 447 ರನ್ ಗಳಿಸಿ ಟಾಪ್ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಆ ಬಳಿಕ ಶಕಿಬ್ ಅಲ್ ಹ¸ನ್À 425, ಜೋ ರೂಟ್ 424 ರನ್ ಆರೋನ್ ಫಿಂಚ್ 396 ಹಾಗೂ 5ನೇ ಸ್ಥಾನದಲ್ಲಿ 319 ರನ್ ಗಳಿಸಿರುವ ರೋಹಿತ್ ಶರ್ಮಾ ಇದ್ದಾರೆ. ಇದೇ ವೇಗದಲ್ಲಿ ನಾಲ್ವರು ಬ್ಯಾಟ್ಸ್ ಮನ್‍ಗಳು ಬ್ಯಾಟ್ಸ್ ಬೀಸಿದರೆ ಸಚಿನ್ ದಾಖಲೆ ಮುರಿಯುವ ಸಾಧ್ಯತೆ ಹೆಚ್ಚಿದೆ.

6 ಪಂದ್ಯಗಳಿಂದ 89.40 ಸರಾಸರಿಯಲ್ಲಿ ವಾರ್ನರ್ 447 ರನ್ ಗಳಿಸಿದ್ದು, ಇನ್ನು 3 ಲೀಗ್ ಪಂದ್ಯಗಳನ್ನು ಆಡುವ ಅವಕಾಶ ಹೊಂದಿದ್ದು, ಸಚಿನ್ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ. ಆದರೆ ಭಾರತ ರೋಹಿತ್ ಶರ್ಮಾ 159.50 ಸರಾಸರಿಯಲ್ಲಿ 319 ರನ್ ಗಳಿಸಿದ್ದು, ಇದೇ ವೇಗದಲ್ಲಿ ಬ್ಯಾಟಿಂಗ್ ನಡೆಸಿದರೆ 800 ಪ್ಲಸ್ ಗಳಿಸುವ ಅವಕಾಶ ಇದೆ.

Rohit Main

ಅಂದಹಾಗೇ ಜೂನ್ 18ರಂದು ಇಂಗ್ಲೆಂಡ್ ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಬೌಲರ್ ರಶಿದ್ ಖಾನ್ 9 ಓವರ್ ಗಳಲ್ಲಿ 110 ರನ್ ನೀಡಿ ಕೆಟ್ಟ ದಾಖಲೆಯನ್ನು ನಿರ್ಮಿಸಿದ್ದರು. ಆ ಬಳಿಕ ನಡೆದ ಆಸ್ಟ್ರೇಲಿಯಾ, ಬಾಂಗ್ಲಾದೇಶದ ನಡುವಿನ ಪಂದ್ಯದಲ್ಲಿ ಇತ್ತಂಡಗಳು 714 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದವು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸೀಸ್ 5 ವಿಕೆಟ್ ಕಳೆದುಕೊಂಡು 381 ರನ್ ಗಳಿಸಿದ್ದರೆ, ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿ ಸೋಲುಂಡಿತ್ತು.

2003ರ ಟೂರ್ನಿಯಲ್ಲಿ ಸೂಪರ್ ಸಿಕ್ಸ್ ಸೇರಿಸಲಾಗಿತ್ತು. ಲೀಗ್ ನಲ್ಲಿ ಆಯ್ಕೆಯಾದ ಟಾಪ್ 6 ತಂಡಗಳು ಮತ್ತೆ ಆಡಬೇಕಿತ್ತು. ಇದರಲ್ಲಿನ ಟಾಪ್ 4 ತಂಡಗಳು ಸೆಮಿಫೈನಲ್ ಗೆ ಆಯ್ಕೆಯಾಗಿದ್ದವು. ನಂತರದ ವಿಶ್ವಕಪ್ ಪಂದ್ಯಗಳಲ್ಲಿ ಸೂಪರ್ ಸಿಕ್ಸ್ ಕೈಬಿಡಲಾಗಿತ್ತು. ಸಚಿನ್ ತೆಂಡೂಲ್ಕರ್ 11 ಪಂದ್ಯಗಳ 11 ಇನ್ನಿಂಗ್ಸ್ ನಲ್ಲಿ 61.18 ಸರಾಸರಿಯಲ್ಲಿ 673 ರನ್ ಹೊಡೆದಿದ್ದರು. 89.25 ಸ್ಟ್ರೈಕ್ ರೇಟ್‍ನಲ್ಲಿ 6 ಅರ್ಧಶತಕ ಒಂದು ಶತಕವನ್ನು ಸಚಿನ್ ಸಿಡಿಸಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *