ಕಮಿಷನ್ ಪಡೀತಿರಾ? ಡಿಕೆಶಿ ಪ್ರಶ್ನೆಗೆ ಹೌದು ಎಂದ ಅಧಿಕಾರಿ

Public TV
2 Min Read
HBL DKShi

– ಸಿ.ಎಸ್.ಶಿವಳ್ಳಿ, ಅವ್ರ ಪತ್ನಿ ಹಸು ಇದ್ದಂಗೆ, ನಾನು ಹಾಗಲ್ಲ
– ಅಧಿಕಾರಿಗಳಿಗೆ ಸಚಿವರಿಂದ ಕ್ಲಾಸ್

ಹುಬ್ಬಳ್ಳಿ: ಕಮಿಷನ್ ಪಡೀತಿರಾ ಎಂಬ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಅಧಿಕಾರಿಯೊಬ್ಬರು ಹೌದು ಎಂದು ಉತ್ತರಿಸಿದ ಪ್ರಸಂಗ ಇಂದು ಕುಂದಗೊಳದಲ್ಲಿ ನಡೆಯಿತು.

ಕುಂದಗೋಳ ತಾಲೂಕಿನ ಸವಾಯಿ ಗಂಧರ್ವ ಭವನದಲ್ಲಿ ಇಂದು ಸಚಿವರು ಹಲವು ಇಲಾಖೆಗಳ ಅಧಿಕಾರಗಳ ಜೊತೆಗೆ ಸಭೆ ನಡೆಸಿದರು. ಈ ವೇಳೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.

HBL DKShi A

ವಿವಿಧ ಯೋಜನೆಗಳ ಅಡಿ ಸರ್ಕಾರದಿಂದ ಬಡವರಿಗೆ ಮನೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಮನೆ ನಿರ್ಮಾಣ ಮಾಡಿಕೊಡಲು ಅಧಿಕಾರಿಗಳು ಎಷ್ಟು ಕಮಿಷನ್ ಪಡೆಯುತ್ತಾರಾ ಎಂದು ಸಚಿವರು ಕುಂದಗೊಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರಿಗೆ ಪ್ರಶ್ನಿಸಿದರು. ಈ ವೇಳೆ ಅಧಿಕಾರಿ ಮೇಟಿ ಅವರು ಹೌದು ಎಂದು ಉತ್ತರಿಸಿದರು. ನೋಡಿ ನೀವು ಎಷ್ಟು ಹಣ ಪಡೆಯುತ್ತಿರಾ ಎಂಬ ಎಲ್ಲ ರೀತಿಯ ಮಾಹಿತಿಯೂ ನನ್ನ ಬಳಿಯಿದೆ. ಆಡಿಯೋ ಇದೆ, ಪ್ಲೇ ಮಾಡ್ಲಾ ಎಂದು ಸಚಿವರು ಕ್ಲಾಸ್ ತೆಗೆದುಕೊಂಡರು.

HBL DKShi D

ಜಿಲ್ಲಾ ಪ್ರಗತಿ ಬಗ್ಗೆ ವರದಿ ನೀಡುತ್ತಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೊರವರ್ ಅವರನ್ನು ತಡೆದ ಡಿ.ಕೆ.ಶಿವಕುಮಾರ್ ಅವರು, ನೋಡಪ್ಪಾ ನೀನು ಜಿಲ್ಲಾ ಮಟ್ಟದ ಅಧಿಕಾರಿ ಆಗಿರುವುದಕ್ಕೆ ನಾಲಾಯಕ್. ನಾನು ಇಲ್ಲಿಗೆ ಹೊಸಬ. ಹೀಗಾಗಿ ಎಷ್ಟು ಪಂಚಾಯತ್‍ಗಳಿವೆ. ಯೋಜನೆ ಯಾವುದು ಎಂಬ ಮಾಹಿತಿ ವರದಿ ವಾಚನ ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ಯೋಜನೆಗೆ ಖರ್ಚು ಮಾಡಿದ ಹಣದ ಮಾಹಿತಿ ನೀಡುವುದಲ್ಲ ಎಂದು ಗುಡುಗಿದರು.

HBL DKShi B

ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಮತ್ತು ಶಾಸಕಿ ಕುಸುಮಾ ಶಿವಳ್ಳಿ ಅವರು ಹಸು ಇದ್ದಂಗೆ. ಆದರೆ ನಾನು ಹಾಗಲ್ಲ. ನನಗೆ ಎಲ್ಲ ರೀತಿ ಲೆಕ್ಕ ನೀಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳು ಸರಿಯಾದ ಮಾಹಿತಿ ಇಟ್ಟುಕೊಂಡು ಮಾತನಾಡಬೇಕು. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿಯೇ ಸಚಿವನಾಗಿದ್ದೇನೆ. ಎಲ್ಲಾ ಇಲಾಖೆ ಬಗ್ಗೆ ಗೊತ್ತು. ನೀವು ನೀಡುವ ಮಾಹಿತಿ ಕೊರತೆ ಇರಬಾರದು. ಅಧಿಕಾರಿಗಳು ಫಲಾನುಭವಿಗಳ ಅಂಕಿ ಸಂಖ್ಯೆ ಸಹಿತ ಮಾಹಿತಿ ಕೊಡಬೇಕು. ನಾನು ಇಲ್ಲಿ ಹಾರ ತುರಾಯಿ ಹಾರಿಸಿಕೊಂಡು ಜೈಕಾರ ಹಾಕಿಸಿಕೊಂಡು ಊಟ ಮಾಡಿ ಹೋಗುವುದಕ್ಕೆ ಬಂದಿಲ್ಲ. ಎಚ್ಚರಿಕೆಯಿಂದ ಮಾಹಿತಿ ಕೊಡಿ. ಮಾಧ್ಯಮದವರಿದ್ದಾರೆ ಎಂದು ಸಭೆ ಆರಂಭಕ್ಕೂ ಮುನ್ನವೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ಯುಟಿ ಖಾದರ್, ಎಂಟಿಬಿ ನಾಗರಾಜ, ಜಯಮಾಲಾ, ಶಾಸಕಿ ಕುಸುಮಾ ಶಿವಳ್ಳಿ ಉಪಸ್ಥಿತರಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *