ದೇವೇಗೌಡ್ರ ಹೇಳಿಕೆಯಿಂದ ಗ್ರಾಮವಾಸ್ತವ್ಯದಲ್ಲಿರೋ ಸಿಎಂ ಸಿಡಿಮಿಡಿ

Public TV
2 Min Read
Grama Vastavya CM HDK

ಬೆಂಗಳೂರು: ಸಿಎಂ ಇಂದಿನಿಂದ ಯಾದಗಿರಿ ಜಿಲ್ಲೆಯಲ್ಲಿ ಗ್ರಾಮವಾಸ್ತವ್ಯ ಆರಂಭಿಸಿದ್ದಾರೆ. ಆದರೆ ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆಯಿಂದ ಸಿಎಂ ಸಿಡಿಮಿಡಿಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಸಿಎಂ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಈಗಾಗಲೇ ಗ್ರಾಮಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಜೊತೆಗೆ ಗ್ರಾಮ ವಾಸ್ತವ್ಯದ ಮೂಲಕ ಹೊಸ ಸ್ಟಾರ್ಟ್ ಆಪ್‍ಗೆ ಸಿಎಂ ಮುಂದಾಗಿದ್ದರು. ಅಷ್ಟೇ ಅಲ್ಲದೆ ಒಂದು ವರ್ಷದ ಕಿತ್ತಾಟ, ವೈಫಲ್ಯ ಆರೋಪಗಳಿಗೆ ಟಾಂಗ್ ಕೊಡಲು ಸಿದ್ಧರಾಗಿದ್ದರು. ಆದರೆ ಇದೀಗ ದೇವೇಗೌಡ ಹೇಳಿಕೆಯಿಂದ ಸಿಎಂ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

vlcsnap 2019 06 21 09h27m08s676

ಅದ್ಧೂರಿ ಪ್ರಚಾರ ಪಡೆದಿದ್ದ 2006ರ ದಿನಗಳನ್ನ ನೆನಪಿಸಲು ಸಿಎಂ ಪ್ಲ್ಯಾನ್ ಮಾಡಿದ್ದರು. ಆದರೆ ಗ್ರಾಮ ವಾಸ್ತವ್ಯದ ಮೊದಲ ದಿನವನ್ನೇ ದೇವೇಗೌಡರು ಡೈವರ್ಟ್ ಮಾಡುವಂತ ಕೆಲಸ ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಇದರಿಂದ ಸಿಎಂ ಅವರು ಮುಜುಗರಗೊಂಡಿದ್ದಾರಂತೆ.

ಪುತ್ರನ ಗ್ರಾಮ ವಾಸ್ತವ್ಯದ ಬಗ್ಗೆ ಗೌಡರು ಮರೆತು ಬಿಟ್ಟಿದ್ದಾರಾ. ನಾನು ಡ್ಯಾಮೇಜ್ ಕಂಟ್ರೋಲ್ ಮಾಡಲು ಹೊರಟರೆ ಇವತ್ತು ಹಿಂಗೆ ಆಗೋಯ್ತು. ನನ್ನ ವಾಸ್ತವ್ಯದ ಮೊದಲ ದಿನವೇ ನಮ್ಮ ತಂದೆ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ನಾನು ಒಂದು ಮಾಡಿದರೆ ಅವರು ಇನ್ನೊಂದು ಮಾಡಿದರು ಎಂದು ಆಪ್ತರ ಬಳಿ ಸಿಎಂ ಹೇಳಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಹಾಗಾದರೆ ದೇವೇಗೌಡರ ಮಧ್ಯಂತರ ಚುನಾವಣೆ ಬಾಂಬ್ ಹಿಂದೆ ತಂತ್ರಗಾರಿಕೆ ಇದೆಯಾ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ದೇವೇಗೌಡರ ಹೇಳಿಕೆ:
ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸಂಶಯವಿಲ್ಲ ಎಂದು ಇಂದು ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಎಸ್‍ವೈ ಸಿಎಂ ಆಗಬಾರದು ಎಂದು ಕಾಂಗ್ರೆಸ್ ನವರು ಬಂದು ಚರ್ಚೆ ಮಾಡದೆ ಸರ್ಕಾರ ರಚನೆಗೆ ಮುಂದಾಗಿದ್ದರು. ಎಚ್‍ಡಿಕೆ ಅವರನ್ನೇ ಸಿಎಂ ಮಾಡಿ ಎಂದರು. ಈಗ ನಮ್ಮ ಒಂದು ಮಂತ್ರಿ ಸ್ಥಾನವನ್ನೂ ಕಾಂಗ್ರೆಸ್ಸಿಗೆ ಸರೆಂಡರ್ ಮಾಡಿದ್ದೀವಿ. ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದೇನೆ. ನಾನೇನಾದರೂ ಮಾತಾಡಿದ್ನಾ ಎಂದು ಪ್ರಶ್ನೆ ಮಾಡಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *