– ಶಿಕ್ಷಣ ಸಚಿವರ ನೇಮಕಕ್ಕೆ ಆಗ್ರಹ
ಬೆಂಗಳೂರು: ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎಚ್. ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಅವರು ಯಾವ ಸೀಮೆ ಸಮನ್ವಯ ಸಮಿತಿ ಅಧ್ಯಕ್ಷ. ಅಹಿಂದ ಲೀಡರ್ ಆಗಿ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದು ಎಷ್ಟು ಸರಿ. ಈ ಮೂಲಕ ಒಂದು ಸಮುದಾಯವನ್ನ ತುಳಿಯೋಕೆ ಹೋಗ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
ರೋಷನ್ ಬೇಗ್ ತುಳಿಯೋದಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ವಿಶ್ವನಾಥ್ ಯಾವತ್ತೂ ವಿಶ್ವನಾಥೇ. ಬೇರೆಯವರಿಗೆ ಹೋಲಿಕೆ ಮಾಡಬೇಡಿ. ನಾನು ಮಂತ್ರಿ ಸ್ಥಾನ ಕೇಳಿಲ್ಲ. ಯಾರ ಮನೆ ಬಾಗಿಲಿಗೂ ನಾನು ಹೋಗಲ್ಲ. ಸಿಎಂ ನನ್ನ ಅನುಭವ ಉಪಯೋಗ ಮಾಡಿಕೊಳ್ಳಲಿಲ್ಲ ಎಂದು ವಿಶ್ವನಾಥ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ವಿರುದ್ಧ ವಿಶ್ವನಾಥ್ ಕಿಡಿ
ಶಿಕ್ಷಣ ಇಲಾಖೆ ಸಿಎಂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸಿಎಂ ಅವರಿಗೆ ಶಿಕ್ಷಣ ಇಲಾಖೆ ಮೇಲೆ ಆಸಕ್ತಿ ಇಲ್ಲದಂತೆ ಕಾಣುತ್ತಿದೆ. 7 ತಿಂಗಳಿಂದ ಸಚಿವರಿಲ್ಲದೆ ಖಾಲಿ ಇದೆ. ಅಧಿಕಾರಿಗಳದ್ದೇ ದರ್ಬಾರ್ ಆಗಿದೆ. ಜಿಟಿ ದೇವೇಗೌಡ ಕೂಡ ಉನ್ನತ ಶಿಕ್ಷಣ ಬೇಡ ಎಂದು ಹೇಳಿದ್ದಾರೆ. ಹೀಗಿದ್ದರೂ ಅದನ್ನ ಅವರ ತಲೆಗೆ ಕಟ್ಟಲಾಗಿದೆ. ಶಿಕ್ಷಣ ಇಲಾಖೆ ನಾವಿಕನಿಲ್ಲದಂತೆ ಆಗಿದೆ. ತಕ್ಷಣ ಶಿಕ್ಷಣ ಸಚಿವರನ್ನ ನೇಮಕ ಮಾಡಿ ಎಂದು ಸಿಎಂಗೆ ವಿಶ್ವನಾಥ್ ಆಗ್ರಹಿಸಿದರು. ಇದನ್ನೂ ಓದಿ:ರಾಜ್ಯಾಧ್ಯಕ್ಷ ಹುದ್ದೆಗೆ ವಿಶ್ವನಾಥ್ ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ – ಹೊರಟ್ಟಿ
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]