ಜೆಡಿಎಸ್ ಸಹವಾಸ ಬೇಡವೇ ಬೇಡ – ಡೆಲ್ಲಿ ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಚಾರ್ಜ್ ಶೀಟ್

Public TV
2 Min Read
RAHUL SIDDU

ಬೆಂಗಳೂರು: ಮೈತ್ರಿ ಸರ್ಕಾರದ ರಕ್ಷ ಕವಚ ಅಂತ ಮುಖ್ಯಮಂತ್ರಿಗಳು ಹೇಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಜೆಡಿಎಸ್ ವಿರುದ್ಧ ಹೈಕಮಾಂಡ್‍ಗೆ ಗಂಭೀರವಾವಾಗಿ ದೂರಿತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದೆಹಲಿಯಲ್ಲಿ ನಿನ್ನೆಯಿಂದಲೂ ಬೀಡು ಬಿಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ಹೈಕಮಾಂಡ್‍ಗೆ ಆರೋಪಗಳ ಪಟ್ಟಿ ಸಲ್ಲಿಸಿದ್ದಾರೆ. ಮೈತ್ರಿ ಸರ್ಕಾರ ವಾಸ್ತವದ ಹೆಸರಿನಲ್ಲಿ ಅಪ್ಪ-ಮಕ್ಕಳಿಗೆ ಲಾಭವೇ ಹೊರತು ನಮಗೆ, ನಮ್ಮ ಕಾರ್ಯಕರ್ತರಿಗೆ ಸೂಜಿಮೊನೆಯಷ್ಟೂ ಪ್ರಯೋಜನವಿಲ್ಲ ಎಂದು ದೂರು ನೀಡಿದ್ದಾರೆ ಎಂದು ಕೇಳಿ ಬಂದಿದೆ.

ಮಾಜಿ ಸಿಎಂ ಇಂದು ಕಾಂಗ್ರೆಸ್ ಹಿರಿಯ ನಾಯಕ ಎ.ಕೆ. ಆಂಟನಿ ಜೊತೆ ವಿವರವಾಗಿ ಚರ್ಚೆ ಮಾಡಿದ್ದಾರೆ. ನಾವು ನಿಮಗೆ ಹೇಳಿರುವುದನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಅವರಿಗೆ ಹೇಳಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರು ಇಂದು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಮುಂದಾಗಿದ್ದರು. ಆದರೆ ನಾಯಕರು ಲಭ್ಯವಾಗದ ಕಾರಣ ಭೇಟಿಯನ್ನು ನಾಳೆಗೆ ಮುಂದೂಡಲಾಗಿದೆ.

CM HDK b

ಮೈತ್ರಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಚಾರ್ಜ್‍ಶೀಟ್?
* ಮೈತ್ರಿ ಸರ್ಕಾರದಿಂದ ಕಾಂಗ್ರೆಸ್‍ಗಂತೂ ಲಾಭ ಆಗ್ತಿಲ್ಲ, ಕೆಲವರಿಗೆ ಮಾತ್ರ ಲಾಭ.
* ಸೋನಿಯಾ ಗಾಂಧಿ ಋಣ ನನ್ನ ಮೇಲಿದೆ, ಕಾಂಗ್ರೆಸ್‍ಗೆ ದ್ರೋಹ ಮಾಡಲ್ಲ.
* ನಾವು ಮತ್ತೆ ಮೇಲೆದ್ದು ಬರಬೇಕಾದ್ರೆ ವಿರೋಧ ಪಕ್ಷದಲ್ಲಿರಬೇಕು.
* ಮೈತ್ರಿ ಸರ್ಕಾರದಲ್ಲಿ ಮುಂದುವರಿದ್ರೆ ಮತ್ತೆ ಹೀನಾಯ ಸ್ಥಿತಿ ತಲುಪ್ತೀವಿ.
* ಚುನಾವಣೆಗೆ ಹೋದಾಗ ಕಾರ್ಯಕರ್ತರು ಕೈ ಕೊಡ್ತಾರೆ, ಲೋಕಸಭೆ ರಿಸಲ್ಟ್ ಇದಕ್ಕೆ ಉದಾಹರಣೆ.

rahul gandhi 2

* ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ತಳಮಟ್ಟದಲ್ಲಿ ಒಂದಾಗಲು ಸಾಧ್ಯವೇ ಇಲ್ಲ.
* ಲಿಂಗಾಯತ ಸಮುದಾಯ ನಮ್ಮಿಂದ ಶಿಫ್ಟ್ ಆಗಿಬಿಟ್ಟಿದೆ.
* ಒಕ್ಕಲಿಗರ ಜತೆಗೆ ಮುಸ್ಲಿಮರು ಜೆಡಿಎಸ್‍ಗೆ ಶಿಫ್ಟ್ ಆಗಬಹುದು, ಅಹಿಂದ ಹಿಡಿದುಕೊಳ್ಳೋದು ಸುಲಭ ಅಲ್ಲ.
* ಮುಂಬೈ, ಕರಾವಳಿ ಬಳಿಕ ಮಧ್ಯ ಕರ್ನಾಟಕ, ಹೈ.ಕ. ಕ್ಯಾಪ್ಚರ್‍ಗೆ ಬಿಜೆಪಿ ಪ್ಲಾನ್ ಮಾಡಿದೆ.
* ಹೀಗಿರುವಾಗ ನಾವು ಹಳೇ ಮೈಸೂರು ಭಾಗದಲ್ಲೂ ಕುಗ್ಗುವ ಭೀತಿ ಇದೆ.
* ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ, ಮೈಸೂರು, ಕೋಲಾರಗಳಲ್ಲಿ ಸೋಲಿಗೆ ಜೆಡಿಎಸ್ ಕಾರಣ

Share This Article
Leave a Comment

Leave a Reply

Your email address will not be published. Required fields are marked *