ಭಾರೀ ಮೊತ್ತಕ್ಕೆ ರಿಸೇಲ್ ಆಗ್ತಿದೆ ಇಂಡೋ-ಪಾಕ್ ಪಂದ್ಯದ ಟಿಕೆಟ್‍ಗಳು

Public TV
1 Min Read
India Vs Pakistan

ಲಂಡನ್: 2019ರ ವಿಶ್ವಕಪ್ ಟೂರ್ನಿಯ ಭಾರೀ ನಿರೀಕ್ಷೆ ಇರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯ ಜೂನ್ 16ರ ಭಾನುವಾರ ನಡೆಯುತ್ತಿದ್ದು, ಈಗಾಗಲೇ ಪಂದ್ಯದ ಟಿಕೆಟ್‍ಗಳು ಕೆಲವೇ ಗಂಟೆಗಳಲ್ಲಿ ಸೇಲ್ ಆಗಿದೆ.

ಎರಡು ದೇಶಗಳು ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿಗಳನ್ನು ಆಡದಿರುವುದರಿಂದ ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಅಭಿಮಾನಿಗಳು ಕುತೂರದಿಂದ ಎದುರು ನೋಡುತ್ತಿದ್ದಾರೆ. ಅಲ್ಲದೇ ಪಂದ್ಯವನ್ನು ಶತಯಗತಾಯ ನೋಡಬೇಕು ಎಂದು ನಿರ್ಧರಿಸಿರುವ ಹಲವರು ಎಷ್ಟೇ ಹಣ ಆದ್ರು ಟಿಕೆಟ್ ಪಡೆಯಲು ಸಿದ್ಧರಾಗಿದ್ದಾರೆ. ವಿಶೇಷ ಎಂದರೆ ಇದುವರೆಗೂ ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್‍ನಲ್ಲಿ 6 ಬಾರಿ ಭಾರತದೊಂದಿಗೆ ಮುಖಾಮುಖಿಯಾಗಿದ್ದು, ಆರು ಬಾರಿಯೂ ಸೋಲುಂಡಿದೆ.

ind vs pak

ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ನಡೆಯುವ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ 20 ಸಾವಿರ ಮಂದಿಗೆ ಆಸನ ವ್ಯವಸ್ಥೆ ಇದ್ದು, ಈಗಾಗಲೇ ಟಿಕೆಟ್ ಮಾರಾಟ ಮುಕ್ತಾಯವಾಗಿದೆ. ಆದರೆ ಸದ್ಯ ಕೆಲ ಟಿಕೆಟ್‍ಗಳ ಮರು ಮಾರಾಟ ನಡೆಯುತ್ತಿದ್ದು, Viagogo ಎಂಬ ವೆಬ್ ಸೈಟ್ ಅಭಿಮಾನಿಗಳಿಂದ ಟಿಕೆಟ್ ಖರೀದಿ ಮಾಡುತ್ತಿದ್ದು, 60 ಸಾವಿರದ ರೂ. ವರೆಗೂ ಟಿಕೆಟ್ ಖರೀದಿ ಮಾಡುತ್ತಿದೆ. ಸದ್ಯ ಖರೀದಿ ಮಾಡಿರುವ ಟಿಕೆಟ್ ಬೆಲೆ 62,610 ರೂ.ಗಳನ್ನು ನೀಡಿದೆ. ಪ್ಲಾಟಿನಂ ವರ್ಗದ ಟಿಕೆಟ್‍ಗಳ ಬೆಲೆ 60 ಸಾವಿರವರೆಗೂ ಇದ್ರೆ, ಬ್ರೋನ್ಜ್ ವರ್ಗದ ಟಿಕೆಟ್ ಗಳು 20 ಸಾವಿರ ರೂ. ದಿಂದ ಆರಂಭವಾಗುತ್ತಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಂತೆ ಪಾಕ್ ವಿರುದ್ಧದ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.

INDvsPAK 1

Share This Article
Leave a Comment

Leave a Reply

Your email address will not be published. Required fields are marked *