ಪಬ್ಲಿಕ್ ಇಂಪ್ಯಾಕ್ಟ್- 890 ಮರಗಳ ಮಾರಣ ಹೋಮಕ್ಕೆ ಕಾರಣವಾದ ಡಿಸಿಎಫ್ ಅಮಾನತು

Public TV
1 Min Read
mdk dcf

ಮಡಿಕೇರಿ: 890 ಮರಗಳ ಮಾರಣ ಹೋಮಕ್ಕೆ ಖುದ್ದು ಅರಣ್ಯ ಇಲಾಖೆಯೇ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಮಡಿಕೇರಿ ಉಪಾವಲಯ ಸಂರಕ್ಷಣಧಿಕಾರಿ ಮಂಜುನಾಥ್ ಅವರು ಕರ್ತವ್ಯ ಲೋಪವೆಸೆಗಿದ್ದಾರೆಂದು ಎಂದು ಪರಿಗಣಿಸಿ ಅಮಾನತು ಮಾಡಲಾಗಿದೆ.

ಮಡಿಕೇರಿ ನಗರದ ಹೊರಭಾಗದಲ್ಲಿರೋ ಕೆ.ನಿಡುಗಡೆ ಗ್ರಾಮದ 68 ಏಕರೆ ಜಾಗದ ಪೈಕಿ 30 ಏಕರೆಯಲ್ಲಿದ್ದ 890 ಮರಗಳ ಮಾರಣ ಹೋಮ ನಡೆದಿದೆ. Public Tv IMPACT copy 2ಇದಕ್ಕೆ ಖುದ್ದು ಅರಣ್ಯ ಇಲಾಖೆಯೇ ಅನುಮತಿ ಕೊಟ್ಟಿದೆ. ಈ ಸಂಬಂಧ ಪಬ್ಲಿಕ್ ಟಿವಿ ಜೂನ್ 6ರಿಂದು ನಿರಂತರವಾಗಿ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೊಡಗು ಡಿಸಿಎಫ್ ಮಂಜುನಾಥ್ ಅವರನ್ನು ಅಮಾನತು ಮಾಡಿದ್ದಾರೆ. ಅಲ್ಲದೆ ಮಂಜುನಾಥ್ ಅವರು ಜಾಗಕ್ಕೆ ಮಾರಿಯ ಕ್ರಿಸ್ಟು ರಾಜ ಅವರನ್ನು ಕೊಡಗಿನ ನೂತನ ಡಿಸಿಎಫ್ ಆಗಿ ಅರಣ್ಯ ಇಲಾಖೆ ನೇಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

mdk dcf 1

ಕೊಡಗು ಜಿಲ್ಲೆಯಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮರಗಳನ್ನು ಕಡಿಯುವುದನ್ನು ನಿಲ್ಲಿಸಿ, ವರದಿಯನ್ನು ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದರು. ಇದೇ ಬೆನ್ನಲ್ಲಿ ಈಗ ಅರಣ್ಯ ಇಲಾಖೆ ಮಡಿಕೇರಿ ಉಪಾವಲಯ ಸಂರಕ್ಷಣಾಧಿಕಾರಿಯನ್ನು ಅಮಾನತು ಮಾಡಿದೆ.

mdk forest 1

ಏನಿದು ಪ್ರಕರಣ?
ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ರೆಸಾರ್ಟ್ ನಿರ್ಮಾಣ ಮಾಡಲು ಬರೋಬ್ಬರಿ 800 ಮರಗಳನ್ನು ಕಡಿಯುವುದಕ್ಕೆ ಸ್ವತಃ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು. ಮಡಿಕೇರಿ ತಾಲೂಕಿನ ಕೆ ನಿಡುಗಣೆಯಲ್ಲಿ ಆಂಧ್ರ ಮೂಲದ ರೆಡ್ಡಿ ಎಂಬವರು 68 ಏಕರೆ ಜಾಗ ಖರೀದಿಸಿದ್ದರು.

ಬೃಹತ್ ಮರ, ಬೆಟ್ಟ ಗುಡ್ಡಗಳಿಂದ ಈ ಜಾಗದಲ್ಲಿ 30 ಎಕರೆಯನ್ನು ಅಭಿವೃದ್ಧಿಪಡಿಸಿ ಹೌಸಿಂಗ್ ಬೊರ್ಡ್ ಗೆ ಕೊಡುತ್ತೇವೆ. ಆ 30 ಎಕರೆಯಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೊಡಿ ಎಂದು ಜಾಗದ ಮಾಲೀಕ ಅನುಮತಿ ಕೇಳಿದ್ದರು. ಈ ಪ್ರಸ್ತಾಪಕ್ಕೆ ಅನುಮತಿ ನೀಡಿದ ಕೊಡಗು ಜಿಲ್ಲಾಡಳಿತ ಕನ್ವರ್ಷನ್‍ಗೆ ಅವಕಾಶ ಕೊಟ್ಟಿತ್ತು.

Share This Article
Leave a Comment

Leave a Reply

Your email address will not be published. Required fields are marked *