ಬಳ್ಳಾರಿ: ಮಾಜಿ ಸಚಿವ, ಗಣಿದಣಿ ಜನಾರ್ದನ ರೆಡ್ಡಿ ನಾಗಸಾಧು ಮೊರೆ ಹೋಗಿದ್ದಾರೆ.
ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೇವರಕೊಳ್ಳದ ನಾಗಸಾಧು ದಿಗಂಬರ ರಾಜಭಾರತಿ ಸ್ವಾಮೀಜಿ ಅವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ದಿಗಂಬರ ರಾಜಭಾರತಿ ಸ್ವಾಮೀಜಿ ವರ್ಷದಲ್ಲಿ ಆರು ತಿಂಗಳು ಮಾತನಾಡುತ್ತಾರೆ ಹಾಗೂ ಉಳಿದ ಆರು ತಿಂಗಳು ಮೌನದಲ್ಲಿರುತ್ತಾರೆ.
ಜನಾರ್ದನ ರೆಡ್ಡಿ ನಾಗಸಾಧುವನ್ನು ಮನೆಗೆ ಕರೆಸಿಕೊಂಡು ತನಗಿರುವ ಕಷ್ಟದ ಬಗ್ಗೆ ಅವರ ಬಳಿ ಹೇಳಿಕೊಂಡಿದ್ದಾರೆ. ಜನಾರ್ದನ ರೆಡ್ಡಿ ಅವರ ಕಷ್ಟ ಕೇಳಿ ಶೀಘ್ರದಲ್ಲೇ ಎಲ್ಲ ಕಷ್ಟ ನಿವಾರಣೆಯಾಗುತ್ತದೆ ಎಂದು ನಾಗಸಾಧು ಆಶೀರ್ವಾದ ಮಾಡಿದ್ದಾರೆ.
ಹೊಸಪೇಟೆ ತಾಲೂಕಿನ ಸಂಕ್ಲಾಪುರದಲ್ಲಿರುವ ಶಾಲೆಯಲ್ಲಿ ಇದೇ ತಿಂಗಳು 15ರಂದು ನಾಗಸಾಧು ಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜನಾರ್ದನ ರೆಡ್ಡಿ ಅವರನ್ನು ನಾಗಸಾಧು ಆಹ್ವಾನಿಸಿದ್ದಾರೆ.