ಸೌತಾಂಪ್ಟನ್: 2019ರ ವಿಶ್ವಕಪ್ ಟೂರ್ನಿಯ ಭಾಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿದ ಟೀಂ ಇಂಡಿಯಾ ತಂಡದ ಪರ ಚಹಲ್ ಉತ್ತಮ ಪ್ರದರ್ಶನ ತೋರಿದ್ದಾರೆ. ಮೊದಲ ಪಂದ್ಯದಲ್ಲಿಯೇ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಚಹಲ್ 10 ಓವರ್ ಗಳಲ್ಲಿ 51 ರನ್ ನೀಡಿ 4 ವಿಕೆಟ್ ಪಡೆದರು.
ವಿಶ್ವಕಪ್ ಪಂದ್ಯದಕ್ಕೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ತೋರಿದ ಉತ್ತಮ ಪ್ರದರ್ಶನ ಇದಾಗಿದೆ. ಅಲ್ಲದೇ ತಂಡದ ಪರ ಉತ್ತಮ ಸ್ಪೆಲ್ ಮಾಡಿದ 2ನೇ ಟೀಂ ಇಂಡಿಯಾ ಬೌಲರ್ ಚಹಲ್ ಆಗಿದ್ದಾರೆ. ಪಂದ್ಯದ ಮಹತ್ವದ ಹಂತದಲ್ಲಿ ಚಹಲ್ ವಿಕೆಟ್ ಉರುಳಿಸಿದ್ದು ವಿಶೇಷ ಸಂಗತಿಯಾಗಿದೆ. ಫಾಫ್ ಡುಪ್ಲೆಸಿಸ್ 38 ರನ್, ರಸಿ ಮ್ಯಾನ್ ಡರ್ ಡೆಸನ್ 22 ರನ್, ಡೇವಿಡ್ ಮಿಲ್ಲರ್ 31 ರನ್ ಹಾಗೂ 34 ರನ್ ಗಳಿಸಿದ್ದ ಡ್ವೇನ್ ಪೆಟೊರ್ಟರಿಯಸ್ ವಿಕೆಟ್ ಪಡೆದರು.
It's been an impressive showing from Yuzvendra Chahal today!
Here's him taking the important wicket of David Miller.#SAvIND #TeamIndiahttps://t.co/mWqkQJX7mj
— ICC Cricket World Cup (@cricketworldcup) June 5, 2019
2015ರ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಪಾದಾರ್ಪಣೆ ಪಂದ್ಯವಾಡಿದ್ದ ಮೊಹಮದ್ ಶಮಿ 35 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಉಳಿದಂತೆ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ದೆಬಶಿತ್ ಮೊಹಂತಿ 1999ರಲ್ಲಿ ಕಿನ್ಯಾ ವಿರುದ್ಧದ ಪಂದ್ಯದಲ್ಲಿ 56 ರನ್ ನೀಡಿ 4 ವಿಕೆಟ್ ಪಡೆದಿದ್ದರು.
ಸ್ಪೆಲ್ ನ ಅಂತಿಮ ಓವರ್ ಗಳಲ್ಲಿ ಚಹಲ್ ಬೌಲಿಂಗ್ ನಲ್ಲಿ ಕ್ರಿಸ್ ಮಾರಿಸ್ ಸಿಕ್ಸರ್ ಸಿಡಿಸಿದರು. ಪಂದ್ಯದಲ್ಲಿ ಟೀಂ ಇಂಡಿಯಾದ ಇಬ್ಬರು ಸ್ಪಿನ್ ಬೌಲರ್ ಗಳು ಕೂಡ ತಮ್ಮ ಸ್ಪೆಲ್ ಪೂರ್ಣಗೊಳಿಸಿದರು. ಚಹಲ್‍ಗೆ ಸಾಥ್ ನೀಡಿದ ಕುಲ್ದೀಪ್ ಯಾದವ್ 46 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ವೇಗದ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಬುಮ್ರಾ ತಲಾ 2 ವಿಕೆಟ್ ಪಡೆದರು.