ಬಳ್ಳಾರಿ: ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಜಿ ಸಂಸದ ಉಗ್ರಪ್ಪ ಸೋಲಿನ ನಂತರ ಆಡಬಾರದ ಮಾತು ಆಡಿ ನಾಲಿಗೆ ಹರಿಬಿಟ್ಟಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಹೌದು. ಉನ್ನತ ಹುದ್ದೆಯಲ್ಲಿದ್ದಾರೆ ಅಂದರೆ ಆ ಸ್ಥಾನಕ್ಕೊಂದು ಗೌರವ ಇರುತ್ತದೆ. ಆದರೆ ಇತ್ತೀಚೆಗೆ ಕೆಲ ರಾಜಕಾರಣಿಗಳು ತಮಗೆ ಬೇಕಾದಂತೆ ನಾಲಿಗೆ ಹರಿಬಿಡುತ್ತಿದ್ದಾರೆ. ಅಂಥವರಲ್ಲಿ ಇದೀಗ ವಿ.ಎಸ್ ಉಗ್ರಪ್ಪ ಕೂಡ ಒಬ್ಬರು.
ಮೊನ್ನೆ ಮೊನ್ನೆಯಷ್ಟೇ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಹಣವನ್ನು ತಂದಿದ್ದರು. ಆದರೆ ಕಾಂಗ್ರೆಸ್ ಮುಖಂಡರು ಆ ದುಡ್ಡನ್ನ ಹಂಚಲೇ ಇಲ್ಲ. ಇದರಿಂದ ಸಿಟ್ಟಿಗೆದ್ದ ಉಗ್ರಪ್ಪ ಅತ್ಯುಗ್ರವಾಗಿ ಬೈಯಲು ಹೋಗಿ ವಿವಾದಕ್ಕೀಡಾಗಿದ್ದಾರೆ. ಹಣ ಹಂಚದ ಮುಖಂಡನಿಗೆ ನಾನು ದುಡ್ಡು ಕೊಡ್ತೀನಿ. ಅವನ ಹೆಂಡತಿ ತಂದು ಮಲಗಿಸಲಿ ಎಂದು ನಾಲಿಗೆ ಹರಿಬಿಟ್ಟಿದ್ದಾರಂತೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ್ಲಿಗಿಯ ಗುಂಡುಮುಣುಗು ಹೋಬಳಿಯ ಮತದಾರರಿಗೆ ಹಂಚೋಕೆ ಎಂದು 27 ಲಕ್ಷ ರೂಪಾಯಿ ತಂದು ಕೊಟ್ಟಿದ್ದರಂತೆ. ಆದರೆ ಆ ಹಣದಲ್ಲಿ 7 ಲಕ್ಷ ರೂಪಾಯಿ ಹಣವನ್ನ ಖಾನಾಹೊಸಹಳ್ಳಿ ಪೊಲೀಸರು ಜಪ್ತಿ ಮಾಡಿದರು. ಇದಕ್ಕೆ ಗುಂಡುಮುಣಗು ಜಿಲ್ಲಾ ಪಂಚಾಯತ್ ಸದಸ್ಯೆ ಪತಿ ತಿಪ್ಪೇಸ್ವಾಮಿಯೇ ಕಾರಣ ಅನ್ನೋದು ಉಗ್ರಪ್ಪ ಅನ್ನೋದು ಉಗ್ರಪ್ಪ ವಾದವಾಗಿದೆ. ಹೀಗಾಗಿ ಉಗ್ರಪ್ಪ ಅವರು ಕಂಡ ಕಂಡಲ್ಲಿ ಅವಾಚ್ಯವಾಗಿ ಕಿಡಿ ಕಾರುತ್ತಿದ್ದಾರೆ. ಅಲ್ಲದೆ ಯಾಕ್ ಸಾರ್ ಹಿಂಗಾಡ್ತೀರಾ ಎಂದು ಕೇಳಿದಕ್ಕೆ ಇಬ್ಬರು ಕಾರ್ಯಕರ್ತರನ್ನೂ ಅರೆಸ್ಟ್ ಮಾಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಒಂದ್ಕಡೆ ಸೋಲಿನ ಹತಾಶೆ, ಮತ್ತೊಂದ್ಕಡೆ ಹಣ ಹಂಚಿಕೆ ಆಗಲಿಲ್ವಲ್ಲ ಅನ್ನೋ ಸಿಟ್ಟು ಉಗ್ರಪ್ಪರನ್ನು ಕಾಡುತ್ತಿದೆಯೋ ಏನೂ, ಒಟ್ಟಿನಲ್ಲಿ ಉಗ್ರಪ್ಪ ಅವರದ್ದೇ ಪಕ್ಷದ ಮುಖಂಡರ ಮನೆಯವರ ಬಗ್ಗೆ ಮಾತಾಡ್ತಿರೋದು ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ.