ಮೋದಿ 2 ಸರ್ಕಾರದಲ್ಲಿ ಕರ್ನಾಟಕದ ಮೂವರಿಗೆ ಮಂತ್ರಿ ಸ್ಥಾನ

Public TV
1 Min Read
cabinet ministers

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕರ್ನಾಟಕದ ಮೂವರಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದೆ. ಕಳೆದ ಬಾರಿ ಸಾಂಖ್ಯಿಕ ಖಾತೆಯನ್ನು ನಿರ್ವಹಿಸಿದ್ದ ಡಿವಿ ಸದಾನಂದ ಗೌಡ ಅವರಿಗೆ ಈ ಬಾರಿಯೂ ಮೋದಿ ಕ್ಯಾಬಿನೆಟ್‍ನಲ್ಲಿ ದರ್ಜೆಯ ಮಂತ್ರಿ ಸ್ಥಾನ ನೀಡಿದ್ದಾರೆ.

ಧಾರವಾಡದ ಸಂಸದ ಪ್ರಹ್ಲಾದ್ ಜೋಷಿ ಮತ್ತು ಬೆಳಗಾವಿಯ ಸಂಸದ ಸುರೇಶ್ ಅಂಗಡಿ ಅವರಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದೆ. ಸದಾನಂದ ಗೌಡ ಒಕ್ಕಲಿಗ, ಪ್ರಹ್ಲಾದ್ ಜೋಷಿ ಬ್ರಾಹ್ಮಣ, ಸುರೇಶ್ ಅಂಗಡಿ ಲಿಂಗಾಯತರಾಗಿದ್ದಾರೆ.

PM Modi 3

ಅಮಿತ್ ಶಾ ಮೂವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಆದರೆ ಖಾತೆ ಯಾವುದು ಎನ್ನುವುದು ತಿಳಿದು ಬಂದಿಲ್ಲ. ಪ್ರಹ್ಲಾದ್ ಜೋಷಿ ಅವರ ಹೆಸರು ಸ್ಪೀಕರ್ ರೇಸ್ ನಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕಳೆದ ಬಾರಿ ಕರ್ನಾಟಕದಿಂದ ಅನಂತ್ ಕುಮಾರ್, ಸದಾನಂದ ಗೌಡ, ರಮೇಶ್ ಜಿಗಜಿಣಗಿ, ಅನಂತ್ ಕುಮಾರ್ ಹೆಗಡೆ, ಸಿದ್ದೇಶ್ವರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿತ್ತು. ಇದನ್ನೂ ಓದಿ: ಫೋನ್ ಹಿಡಿದು ಕುಳಿತ ಸಂಸದರು – ಮೋದಿ ಕೈಯಲ್ಲಿದೆ 4 ಪಟ್ಟಿ: ಮಾನದಂಡ ಏನು?

Share This Article