ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಅವರು ಸದ್ಯಕ್ಕೆ ತಮ್ಮ ಮುದ್ದು ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇದೀಗ ಅವರ ಮಗಳೊಂದಿಗಿರುವ ಅಪ್ಪ-ಅಮ್ಮನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಟಿ ರಾಧಿಕಾ ಅವರು ಮಗಳಿಗೆ ಚಿಟ್ಟೆಯಂತೆ ಉಡುಪು ಹಾಕಿದ್ದು, ಪುತ್ರಿಯ ಪಕ್ಕದಲ್ಲಿ ರಾಧಿಕಾ ಜೊತೆಗೆ ಯಶ್ ಕುಳಿತ್ತಿದ್ದಾರೆ. ಒಂದು ಫೋಟೋದಲ್ಲಿ ಮಗಳು ಮತ್ತು ಯಶ್ ಅವರು ರಾಧಿಕಾ ಅವರನ್ನು ನೋಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೊಂದು ಫೋಟೋದಲ್ಲಿ ಅಮ್ಮ ರಾಧಿಕಾ ಮಗಳನ್ನು ನೋಡುತ್ತಿದ್ದಾರೆ. ಮಗು ಕೂಡ ಪ್ರೀತಿಯ ಅಮ್ಮನನ್ನು ನೋಡುತ್ತಿದೆ. ಇತ್ತ ಯಶ್ ಕೂಡ ತಮ್ಮ ಪತ್ನಿ ರಾಧಿಕಾ ಅವರನ್ನೇ ನೋಡುತ್ತಿದ್ದಾರೆ.
ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸುಂದರ ಕುಟುಂಬ, ಕ್ಯೂಟ್ ಫ್ಯಾಮಿಲಿ ಎಂದು ಅಭಿಮಾನಿಗಳು ಕಮೆಂಟ್ಸ್ ಮಾಡುತ್ತಿದ್ದಾರೆ. ಯಶ್ ದಂಪತಿ ತಮ್ಮ ಮಗಳ ಫೋಟೋವನ್ನು ಮೊದಲ ಬಾರಿಗೆ ಅಕ್ಷಯ ತೃತೀಯ ದಿನದಂದು ರಿವೀಲ್ ಮಾಡಿದ್ದರು.