ಬ್ಯೂನಸ್ ಏರ್ಸ್: 11 ವರ್ಷದ ಬಾಲಕಿ ತನ್ನ ತಾಯಿಯನ್ನು ದರೋಡೆಕೋರನಿಂದ ರಕ್ಷಿಸಿದ್ದಾಳೆ. ಬಾಲಕಿಯು ತನ್ನ ತಾಯಿಯನ್ನು ರಕ್ಷಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಬಾಲಕಿಯ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಈ ಘಟನೆ ಅರ್ಜಿಂಟೀನಾದ ಬ್ಯೂನಸ್ ಏರ್ಸ್ ನಗರದಲ್ಲಿ ಬುಧವಾರ ನಡೆದಿದೆ. ಬುಧವಾರ ರಾತ್ರಿ ತಾಯಿ-ಮಗಳು ರಾತ್ರಿ 9.30ಕ್ಕೆ ಸ್ಕೂಟಿಯಲ್ಲಿ ಮನೆಗೆ ಆಗಮಿಸಿದ್ದಾರೆ. ಸ್ಕೂಟಿಯಿಂದ ಕೆಳಗಿಳಿದ ಮಗಳು ಮನೆಯ ಮುಂದಿನ ಮೆಟ್ಟಿಲು ಮೇಲೆ ನಿಂತಿದ್ದಾಳೆ. ತಾಯಿ ಸ್ಕೂಟಿ ಪಾರ್ಕ್ ಮಾಡುವ ವೇಳೆ ಹಿಂದಿನಿಂದ ಬಂದ ದರೋಡೆಕೋರ ಮಹಿಳೆಯ ಕೈಯಲ್ಲಿದ್ದದನ್ನು ದೋಚಲು ಮುಂದಾಗಿದ್ದಾನೆ. ಸ್ಕೂಟಿಯನ್ನು ತನಗೆ ಕೊಡುವಂತೆ ಧಮ್ಕಿ ಹಾಕಿದ್ದಾನೆ.
ಮನೆಯ ಮುಂದೆ ನಿಂತಿದ್ದ ಬಾಲಕಿ ಕ್ಷಣ ಮಾತ್ರದಲ್ಲಿ ತಾಯಿ ಬಳಿ ತೆರಳಿ ದರೋಡೆಕೋರನ ತಲೆಗೆ ಜಿಗಿದು ಸಖತ್ ಪಂಚ್ ನೀಡಿದ್ದಾಳೆ. ಮಗಳ ಸಹಾಯ ಸಿಗುತ್ತಲೇ ಮಹಿಳೆ ಸ್ಕೂಟಿಯನ್ನು ಬಿಟ್ಟು ಆತನ ಮೇಲೆ ಮುಗಿಬಿದ್ದಿದ್ದಾಳೆ. ತಾಯಿ-ಮಗಳು ಅಟ್ಯಾಕ್ ಮಾಡುತ್ತಲೇ ಭಯಭೀತನಾದ ದರೋಡೆಕೋರ ಅಲ್ಲಿಂದ ಕಾಲ್ಕಿತ್ತಿದ್ದಾನೆ.
https://www.youtube.com/watch?v=DvAKQHKGhqE