ರೈಲಿನಡಿ ಸಿಲುಕ್ತಿದ್ದ ಮಹಿಳೆಯನ್ನ ರಕ್ಷಿಸಿದ ರೈಲ್ವೇ ಎಂಜಿನೀಯರ್

Public TV
1 Min Read
Railway Woman

ಭುವನೇಶ್ವರ್: ಚಲಿಸುತಿದ್ದ ರೈಲಿನಿಂದ ಕೆಳಗಿಳಿಯಲು ಪ್ರಯತ್ನಿಸಿದ್ದ ಮಹಿಳೆಯನ್ನು ರೈಲ್ವೇ ಎಂಜಿನೀಯರ್ ರಕ್ಷಣೆ ಮಾಡಿದ್ದಾರೆ. ಒಡಿಶಾದ ಕಟಕ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ.

ಈ ಎಲ್ಲ ದೃಶ್ಯಾವಳಿಗಳು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈಸ್ಟ್ ಕೋಸ್ಟ್ ರೈಲ್ವೆ, 38 ಸೆಕೆಂಡ್ ಈ ವಿಡಿಯೋವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡು ಚಲಿಸುತ್ತಿರುವ ರೈಲಿನಿಂದ ಇಳಿಯುವ ದುಸ್ಸಾಹಸಕ್ಕೆ ಮುಂದಾಗಬೇಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.

ಶುಕ್ರವಾರ ಪುದುಚೇರಿ-ಹಾವಡಾ ಎಕ್ಸ್ ಪ್ರೆಸ್ (12868) ರೈಲು ಕಟಕ್ ನಿಲ್ದಾಣ ಮಾರ್ಗವಾಗಿ ಹೊರಟ್ಟಿತ್ತು. ಕಟಕ್ ನಿಲ್ದಾಣದಲ್ಲಿ ರೈಲು ನಿಲುಗಡೆಯನ್ನು ಹೊಂದಿರದ ಕಾರಣ ಪ್ಲಾಟ್‍ಫಾರಂನಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಬೋಗಿಯಿಂದ ಹೊರ ಬಂದ ಮಹಿಳೆ ದ್ವಾರದ ಒಂದು ಹ್ಯಾಂಡಲ್ ಹಿಡಿದು ಇಳಿಯಲು ಮುಂದಾಗಿದ್ದಾರೆ. ಆಯತಪ್ಪಿದ ಮಹಿಳೆ ರೈಲಿನಡಿ ಸಿಲುಕುತ್ತಿದ್ದರು. ಕೂಡಲೇ ಎಚ್ಚೆತ್ತ ಪ್ಲಾಟ್‍ಫಾರಂನಲ್ಲಿ ನಿಂತಿದ್ದ ರೈಲ್ವೇ ಎಂಜಿನೀಯರ್ ಮಹಿಳೆಯನ್ನು ರಕ್ಷಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *