ರಾಯಚೂರಿನಲ್ಲಿ ಕಾಂಗ್ರೆಸ್ ಭದ್ರಕೋಟೆ ಛಿದ್ರ- ಭರ್ಜರಿಯಾಗಿ ಅರಳಿದ ಕಮಲ

Public TV
1 Min Read
AMRESHWAR NAIK

ರಾಯಚೂರು: ಕಾಂಗ್ರೆಸ್ ಭದ್ರಕೋಟೆ ಎಂದೇ ಕರೆಯಿಸಿಕೊಳ್ಳುತ್ತಿದ್ದ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದೆ. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಒಟ್ಟು 1,17,716 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ರಾಜಾ ಅಮರೇಶ್ವರ ನಾಯಕ ಅವರು 6,68,337 ಮತಗಳನ್ನು ಪಡೆದರೆ, ಮೈತ್ರಿ ಪಕ್ಷದ ಅಭ್ಯರ್ಥಿ ಕಾಂಗ್ರೆಸ್‍ನ ಬಿ.ವಿ.ನಾಯಕ 4,80,622 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಿ.ವಿ.ನಾಯಕ ಅವರು ಭಾರೀ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

AMRESHWAR NAIK A

ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ದೇವದುರ್ಗ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಣದಲ್ಲಿದ್ದ ಬಿಎಸ್‍ಪಿಯ ವೆಂಕನಗೌಡ ನಾಯಕ 13,830 ಮತಗಳು, ಉತ್ತಮ ಪ್ರಜಾಕೀಯ ಪಕ್ಷದ ನಿರಂಜನ ನಾಯಕ 7,833 ಮತ ಹಾಗೂ ಎಸ್‍ಯುಸಿಐನ ಕೆ.ಸೋಮಶೇಖರ 8,842 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 14,921 ಮತದಾರರು ನೋಟಾ ಹಕ್ಕು ಚಲಾಯಿಸಿದ್ದಾರೆ. ಚುಮಾವಣೆಯಲ್ಲಿ ಒಟ್ಟು 11,24,962 ಮತಗಳು ಚಲಾವಣೆಯಾಗಿವೆ. ಭರ್ಜರಿ ಜಯಭೇರಿ ಬಾರಿಸಿರುವ ಬಿಜೆಪಿಯ ರಾಜಾ ಅಮರೇಶ್ವರ ನಾಯಕ್ ಕ್ಷೇತ್ರಕ್ಕೆ ಇರುವ ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿಯನ್ನ ಕಿತ್ತೊಗೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *