ನವದೆಹಲಿ: ಪ್ರತಿ ದಿನ ಬೈಯುತ್ತಿದ್ದಾರೆ ಎಂದು ಕೋಪದಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆಗೈದು ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಅಮನ್(22) ತಂದೆಯನ್ನೇ ಕೊಲೆ ಮಾಡಿದ ಮಗ. ಕೆಫೆ ಮಾಲೀಕನಾಗಿರುವ ಅಮನ್ ತಂದೆ ಸಂದೇಶ್ ಅಗರ್ ವಾಲ್(48) ದಿನ ಬೈಯುತ್ತಿದ್ದರು ಎಂದು ಕೊಲೆ ಮಾಡಿದ್ದಾನೆ. ಅಮನ್ ತನ್ನ ತಂದೆ ಸಂದೇಶ್‍ರನ್ನು ಕೊಲೆ ಮಾಡಿದ ನಂತರ ಅವರ ದೇಹವನ್ನು 25 ಪೀಸ್ ಮಾಡಿ ನಾಲ್ಕು ಬ್ಯಾಗ್‍ನಲ್ಲಿ ತುಂಬಿಸಿದ್ದಾನೆ.
ಈ ವಿಷಯ ತಿಳಿದ ಪೊಲೀಸರು ಮಂಗಳವಾರ ರಾತ್ರಿ ಪೂರ್ವ ದೆಹಲಿಯ ಶಾದಾರಾದಲ್ಲಿ ಆರೋಪಿ ಅಮನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಮನ್ ತಾನು ಕೊಲೆ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ನನ್ನ ತಂದೆ ನನಗೆ ಯಾವಾಗಲೂ ಬೈಯುತ್ತಿದ್ದರು. ಹಾಗಾಗಿ ಕೋಪದಲ್ಲಿ ನಾನು ಅವರನ್ನು ಕೊಲೆ ಮಾಡಿದೆ. ಕೊಲೆ ಮಾಡಿದ ಬಳಿಕ ಅವರ ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿ ಎಸೆಯಲು ತೀರ್ಮಾನಿಸಿದ್ದೆ ಎಂದು ಆರೋಪಿ ಅಮನ್ ಹೇಳಿದ್ದಾನೆ.
ಈ ಕೊಲೆಯಲ್ಲಿ ಅಮನ್ ತಾಯಿ ಹಾಗೂ ಒಡಹುಟ್ಟಿದವರು ಭಾಗಿಯಾಗಿದ್ದಾರೆ. ಆಸ್ತಿ ವಿಚಾರವಾಗಿ ಅಮನ್ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಸಂದೇಶ್ ಕುಮಾರ್ ಅವರ ಸಹೋದರ ಪೊಲೀಸರ ಬಳಿ ಆರೋಪಿಸಿದ್ದಾರೆ.