ಬೆಳಗಾವಿ: ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳು ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬನ್ನೂರು ಕೊಟ್ಟಲಗಿ ಗ್ರಾಮದ ಮಧ್ಯೆ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಅಲಾಬಾಕ್ಷ್ ಇಬ್ರಾಹಿಂ ಸನದಿ(23) ಹಾಗೂ ಸುಪ್ರಿತಾ ಸಿದ್ದಪ್ಪ ಕೊಂಡಿ(20) ಶವವಾಗಿ ಪತ್ತೆಯಾದ ಪ್ರೇಮಿಗಳು. ಸುಪ್ರಿತಾ ಮತ್ತು ಇಬ್ರಾಹಿಂ ಇಬ್ಬರೂ ಸಹ ಕೊಟ್ಟಲಗಿ ಗ್ರಾಮದ ನಿವಾಸಿಗಳಾಗಿದ್ದು, ಕಳೆದ ಒಂದು ವಾರದ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು.
ಸುಪ್ರಿತಾ ಪೋಷಕರು ತಮ್ಮ ಮಗಳನ್ನು ಬಾಲ್ಯದಲ್ಲೇ ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ಆದರೆ ಸುಪ್ರಿತಾ ತನ್ನ ಪತಿಯನ್ನು ಬಿಟ್ಟು ಇಬ್ರಾಹಿಂನನ್ನು ಪ್ರೀತಿಸುತ್ತಿದ್ದಳು. ಕಳೆದ ಒಂದು ವಾರದ ಹಿಂದೆ ಓಡಿ ಹೋದ ಪ್ರೇಮಿಗಳು ದುರಂತವಾಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸುತ್ತಿದ್ದಾರೆ.