ಸೆಲ್ಫಿ ಫೋಟೋ ಡಿಲೀಟ್ ಮಾಡಲು ಒಪ್ಪದ ಪ್ರಿಯಕರನನ್ನೇ ಅಪಹರಿಸಿದ ಪ್ರಿಯತಮೆ!

Public TV
1 Min Read
phone

ಚೆನ್ನೈ: ಸೆಲ್ಫಿ ಫೋಟೋ ಡಿಲೀಟ್ ಮಾಡಲು ಒಪ್ಪದ ಪ್ರಿಯಕರನನ್ನೇ ಪ್ರೇಮಿಯೊಬ್ಬಳು ಅಪಹರಿಸಿ, ಲೂಟಿ ಮಾಡಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ನವೀನ್ ಅಹ್ಮದ್ ಅಪಹರಣವಾಗಿದ್ದ ಪ್ರಿಯಕರ. ಅಮೆರಿಕ ಮೂಲದ ಮಹಿಳೆ ನಾಲ್ಕು ಜನರಿಗೆ ಸುಪಾರಿ ಕೊಟ್ಟು ನವೀನ್ ಅಹ್ಮದ್‍ನನ್ನು ಅಪಹರಣ ಮಾಡಿಸಿ, ಲೂಟಿ ಮಾಡಿದ್ದಳು.

love complaint 1

ಅಮೆರಿಕ ಮೂಲದ ಮಹಿಳೆ ಹಾಗೂ ನವೀನ್ ಅಹ್ಮದ್ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ಚೆನ್ನೈನ ಅಣ್ಣಾ ನಗರ ಪ್ರದೇಶದ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಆಗ ನವೀನ್ ಗೆಳತಿಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಇದರಿಂದಾಗಿ ಕೋಪಗೊಂಡ ಮಹಿಳೆ ಆತನ ಜೊತೆಗೆ ಇರುವ ಸೆಲ್ಫಿ ಫೋಟೋವನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ನವೀನ್ ಒಪ್ಪಲಿಲ್ಲ. ಹೀಗಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದು ನವೀನ್ ಅಹ್ಮದ್ ಮಹಿಳೆಯ ತಲೆಗೆ ಹೆಲ್ಮೆಟ್ ನಿಂದ ಹೊಡೆದಿದ್ದಾನೆ.

ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ನವೀನ್ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಗೆಳೆಯರನ್ನು ಪರಿಚಯ ಮಾಡಿಕೊಂಡಿದ್ದಳು. ಅವರ ಸಹಾಯದಿಂದ ನವೀನ್‍ನನ್ನು ಅಪಹರಿಸಲು ಪ್ಲಾನ್ ರೂಪಿಸಿದ್ದಳು. ಅದರಂತೆ ನಾಲ್ವರು ಯುವಕರು ನವೀನ್‍ನನ್ನು ಅಪಹರಿಸಿ ಜಾಫರ್ ಖಾನ್‍ಪೇಟೆಗೆ ಹೊತ್ತುಯ್ದಿದ್ದಾರೆ. ಬಳಿಕ ಐಪ್ಯಾಡ್, ವಾಚ್ ಹಾಗೂ ಬೆಲೆ ಬಾಳುವ ವಸ್ತುವನ್ನು ದೋಚಿ ಆತನನ್ನು ಇಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

love

ನವೀನ್ ಬೆಳಗ್ಗೆ ಎದ್ದು ನೋಡಿದಾಗ ಅಲ್ಲಿ ಯಾರೂ ಇರಿಲಿಲ್ಲ. ತಕ್ಷಣವೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಮೊಬೈಲ್ ಮೂಲಕ ಮನೆಗೆ ಕರೆ ಮಾಡಿ, ಘಟನೆ ವಿವರಿಸಿದ್ದಾನೆ. ನವೀನ್ ಈ ಸಂಬಂಧ ಟಿಪಿ ಚತ್ರಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *