ಲಂಡನ್: ಹೈದರಾಬಾದ್ ಮೂಲದ ವ್ಯಕ್ತಿಯನ್ನು ದುಷ್ಕರ್ಮಿಯೊಬ್ಬ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಲಂಡನ್‍ನಲ್ಲಿ ನಡೆದಿದೆ.
ಮೊಹಮ್ಮದ್ ನದೀಮುದ್ದೀನ್ ಕೊಲೆಯಾದ ವ್ಯಕ್ತಿ. ನದೀಮುದ್ದೀನ್ ಅವರು ಲಂಡನ್‍ನ ಟೆಸ್ಕೋ ಸೂಪರ್ ಮಾರ್ಕೆಟ್‍ನ ಮಾಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನದೀಮುದ್ದೀನ್ ಕಳೆದ 6 ವರ್ಷದಿಂದ ಲಂಡನ್‍ನಲ್ಲಿ ವಾಸಿಸುತ್ತಿದ್ದರು. ಕಳೆದ 1 ತಿಂಗಳಷ್ಟೇ ಅವರ ಪತ್ನಿ ಲಂಡನ್‍ಗೆ ಆಗಮಿಸಿದ್ದರು.
ನದೀಮುದ್ದೀನ್ ಬುಧವಾರ ಮನೆಗೆ ಹಿಂತಿರುಗಲಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ಮಾಲ್ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಮಾಲ್ ಸಿಬ್ಬಂದಿ ಕೂಡ ಹುಡುಕಾಟ ನಡೆಸಿದಾಗ ನದೀಮುದ್ದೀನ್ ಪಾರ್ಕಿಂಗ್‍ನಲ್ಲಿ ಶವವಾಗಿ ಪತ್ತೆಯಾಗಿದ್ದರು.
Hyderabad native Mohd Nadeemuddin who was working at a mall in Tesco supermarket & had been living in London for past 6 years, was stabbed to death in Slough on Wednesday. Case registered, investigation underway. Family has appealed to EAM Sushma Swaraj to help them go to London pic.twitter.com/XcAumU8mfX
— ANI (@ANI) May 10, 2019
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ ನದೀಮುದ್ದೀನ್ ಸಹದ್ಯೋಗಿಗಳ ವಿಚಾರಣೆ ನಡೆಸುತ್ತಿದ್ದಾರೆ. ನದೀಮುದ್ದೀನ್ ಅವರನ್ನು ಏಷ್ಯಾ ಮೂಲದ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಅವರ ಸ್ನೇಹಿತ ಫಹೀಂ ಖುರೇಶಿ ತಿಳಿಸಿದ್ದಾರೆ.
ಹೈದರಾಬಾದ್‍ನಲ್ಲಿರುವ ನದೀಮುದ್ದೀನ್ ಪೋಷಕರಿಗೆ ಈ ವಿಷಯ ತಿಳಿಸಲಾಗಿದೆ. ನದೀಮುದ್ದೀನ್ ಮೃತದೇಹ ತರಲು ಅವರ ಪೋಷಕರು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಸಹಾಯ ಕೇಳಿದ್ದಾರೆ.