ನಟಿಯ ಮನೆಗೆ ನುಗ್ಗಿ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಮದ್ವೆಗೆ ಒತ್ತಾಯ

Public TV
1 Min Read
rithika

ಚೆನ್ನೈ: ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಿರುತೆರೆಯ ನಟಿಯ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿರುವ ಘಟನೆ ಚೆನ್ನೈನ ವಡಪಳನಿಯಲ್ಲಿ ಗುರುವಾರ ನಡೆದಿದೆ.

ಕಿರುತೆರೆ ನಟಿ ರಿತಿಕಾ ಅವರ ಮನೆಗೆ ತೆರಳಿದ ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ನಟಿ ರಿತಿಕಾ ತಮ್ಮ ತಂದೆ ಸುಬ್ರಹ್ಮಣಿ ಜೊತೆ ವಡಪಳನಿಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾಗ ಭರತ್ ಮನೆಗೆ ನುಗ್ಗಿ ಮದುವೆಯ ಪ್ರಸ್ತಾಪ ಮಾಡಿದ್ದಾನೆ. ಈಗ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ruithi

ನಡೆದಿದ್ದೇನೆ?
ರಿತಿಕಾ ತಮಿಳಿನ ‘ರಾಜಾರಾಣಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಡಬ್‍ಸ್ಮಾಶ್, ಟಿಕ್‍ಟಾಕ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಖ್ಯಾತಿ ಪಡೆದಿದ್ದಾರೆ. ಇವರ ಅಭಿನಯಕ್ಕೆ ಮನಸೋತ ಭರತ್ ಮದುವೆಯಾಗಲು ಬಯಸಿದ್ದಾನೆ.

ಗುರುವಾರ ನೇರವಾಗಿ ರಿತಿಕಾ ಅಪಾರ್ಟ್‌ಮೆಂಟ್‌ಗೆ ಹೋಗಿದ್ದು, ಬಾಗಿಲು ಬಡಿದಿದ್ದಾನೆ. ಆಗ ರಿತಿಕಾರ ತಂದೆ ಸುಬ್ರಹ್ಮಣಿ ಬಾಗಿಲು ತೆರೆದಿದ್ದಾರೆ. ಬಾಗಿಲು ತೆರೆದ ತಕ್ಷಣ ಮನೆಗೆ ನುಗ್ಗಿ ರಿತಿಕಾರನ್ನು ನನಗೆ ಕೊಟ್ಟು ಮದುವೆ ಮಾಡಬೇಕು ಎಂದು ತಂದೆಯ ಬಳಿ ಮನವಿ ಮಾಡಿಕೊಂಡಿದ್ದಾನೆ.

ಯುವಕನ ಮಾತು ಕೇಳಿ ಅವರ ತಂದೆ ಶಾಕ್ ಆಗಿದ್ದಾರೆ. ಬಳಿಕ ಇಬ್ಬರ ನಡುವೆ ವಾದ ನಡೆದಿದೆ. ಆಗ ಭರತ್ ಕೋಪಕೊಂಡು ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಲೇ ಬೇಕು ಎಂದು ಹಠ ಹಿಡಿದಿದ್ದಾನೆ. ಇವರ ಜಗಳವನ್ನು ನೆರೆಹೊರೆಯವರು ಕೇಳಿಸಿಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಭರತ್‍ನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ.

20992740 349649005472660 6445001222978355095 n

ಬಂಧಿತ ಭರತ್ ಗೋಬಿಚೆಟ್ಟಿ ಪಾಳ್ಯದ ನಿವಾಸಿಯಾಗಿದ್ದು, ಈತ ಇಂಜಿನಿಯರಿಂಗ್ ಮಾಡಿ ಉದ್ಯೋಗ ಹುಡುಕಿಕೊಂಡು ಚೆನ್ನೈಗೆ ಬಂದಿದ್ದನು. ಭರತ್ ಗುರುವಾರ ತಮ್ಮ ಊರಿಗೆ ಹೋಗಲು ತಯಾರಾಗಿದ್ದು, ನಂತರ ರಿತಿಕಾ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿತಿಕಾ ಎಂದರೆ ನನಗೆ ತುಂಬಾ ಇಷ್ಟ, ನಾನು ಅವರನ್ನು ಪ್ರೀತಿಸುತ್ತಿದ್ದೇನೆ. ಹೀಗಾಗಿ ಅವರನ್ನೇ ಮದುವೆಯಾಗಲು ಇಚ್ಛಿಸಿದ್ದೆ ಎಂದು ಭರತ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *