ಮೋದಿ ಕಿವಿಗೊಟ್ಟು ಕೇಳಲಿ, 5 ವರ್ಷಗಳಲ್ಲಿ 942 ಬಾಂಬ್ ದಾಳಿಯಾಗಿವೆ: ರಾಹುಲ್ ಗಾಂಧಿ

Public TV
1 Min Read
modi rahul gandhi 2

ನವದೆಹಲಿ: ಭಾರತದಲ್ಲಿ 2014ರ ಬಳಿಕ ಯಾವುದೇ ಭೀಕರ ಸ್ಫೋಟಗಳು ಸಂಭವಿಸಿಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಾಂಬ್ ದಾಳಿಯ ಲೆಕ್ಕ ಕೊಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ ಕಿವಿಗೊಟ್ಟು ಕೇಳಿ, 2014ರಿಂದ ಇಲ್ಲಿಯವರೆಗೆ ಪುಲ್ವಾಮಾ, ಪಠಾಣ್‍ಕೋಟ್, ಉರಿ, ಗಡ್‍ಚಿರೋಲಿ ಸೇರಿದಂತೆ 942 ಭೀಕರ ದಾಳಿಗಳು ಭಾರತದಲ್ಲಿ ಸಂಭವಿಸಿವೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪಿ.ಚಿದಂಬರಂ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿನ ಶಕ್ತಿ ಕುಂದಿದ್ಯಾ ಅಥವಾ ಅಭ್ಯಾಸಬಲದಿಂದ ಹೀಗೆ ಹೇಳಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಹೇಳಿದ್ದೇನು?:
ಬೆಂಗಳೂರಿನಲ್ಲಿ ಏಪ್ರಿಲ್ 13ರಂದು ನಡೆದಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ನರೇಂದ್ರ ಮೋದಿ ಅವರು, ಕಳೆದ ಐದು ವರ್ಷಗಳಿಂದ ಭಾರತದಲ್ಲಿ ಯಾವುದಾದರೂ ಭೀಕರ ಸ್ಫೋಟಗಳು ಸಂಭವಿಸಿದ್ಯಾ? ದೇಶದ ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರಾ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಕೇಳಿದ್ದರು. ಭಾಷಣ ಮುಂದುವರಿಸಿದ ಮೋದಿ ಅವರು, ನೀವು ನೀಡಿದ ಮತಗಳ ಬಲದಿಂದ ಚೌಕಿದಾರ್ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದರು.

modi 9

ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ನಿನ್ನೆಯಷ್ಟೇ ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ನಡೆದ ನಕ್ಸಲರ ದಾಳಿಗೆ 16 ಜನ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಹುತಾತ್ಮರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *