ಬ್ರೆಜಿಲ್: ಕ್ಯಾಟ್‍ವಾಕ್ ಮಾಡುತ್ತಾ ರ‌್ಯಾಂಪ್ ಚಾಕ್ ವೇದಿಕೆ ಮೇಲೆಯೇ ಕುಸಿದು ಬಿದ್ದು ಮಾಡೆಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೌಪೌಲೊ ಫ್ಯಾಷನ್ ವಿಕ್‍ನಲ್ಲಿ ನಡೆದಿದೆ.
ಮಾಡೆಲ್ ಟೇಲ್ಸ್ ಸೋರ್ಸ್, ಫ್ಯಾಷನ್ ವಿಕ್ ಅಂತಿಮ ದಿನದಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಕ್ಯಾಟ್‍ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಕಾರ್ಯಕ್ರಮದ ಆಯೋಜಕರು ಟೇಲ್ಸ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆ ಸಾಗಿಸುವ ಪ್ರಯತ್ನ ನಡೆಸಿದರು. ಆದರೆ ಆಸ್ಪತ್ರೆಗೆ ತಲುಪುವ ವೇಳೆಗೆ ಟೇಲ್ಸ್ ಕೊನೆಯುಸಿರೆಳೆದಿದ್ದರು.
26 ವರ್ಷದ ಟೇಲ್ಸ್ ವೇದಿಕೆ ಮೇಲೆಯೇ ಸಾವನ್ನಪ್ಪಿದ್ದು ತಮಗೆ ಶಾಕ್ ಆಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರತಿಕ್ರಿಯೆ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.