ಬೆಂಗಳೂರು: ಭಯೋತ್ಪಾದಕರನ್ನು ಮುಸ್ಲಿಮರು ಹಿಡಿದು ಕೊಡಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ಇಸ್ಲಾಂ ಧರ್ಮಕ್ಕೆ ಹುಟ್ಟಿದ ಭಯೋತ್ಪಾದಕರು ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡಿವೆ. ಇದರಿಂದ ಸಮಾಜದಲ್ಲಿ ಅಹಿತಕರ ಘಟನೆಗಳನ್ನು ನಡೆಸುತ್ತಿವೆ ಎಂದು ಅವರು ಆರೋಪ ಮಾಡಿದರು.
ಶ್ರೀಲಂಕಾದಲ್ಲಿ ಮುನ್ನೂರಕ್ಕೂ ಹೆಚ್ಚು ಜನರನ್ನು ಕೊಂದಿರುವುದು ದೊಡ್ಡ ದುರಂತ. ನಾನೇನಾದರೂ ಅಧಿಕಾರದಲ್ಲಿ ಇದ್ದಿದ್ದರೆ ಎಲ್ಲರನ್ನೂ ಸುಡಬೇಕು ಎಂದು ಆದೇಶ ನೀಡುತ್ತಿದ್ದೆ. ಪ್ರಪಂಚದ ಮನುಕುಲದ ಒಂದು ಪರ್ಸೆಂಟ್ ಇಲ್ಲದ ಭಯೋತ್ಪಾದಕರನ್ನು ನಾವೇ ಹಿಡಿಯಬೇಕು. ಉಗ್ರರು ಹೆಚ್ಚಾಗಿರುವ ಪಾಕಿಸ್ತಾನಕ್ಕೆ ಇಡೀ ಪ್ರಪಂಚ ಎಚ್ಚರಿಕೆ ಕೊಡಬೇಕಾಗಿದೆ ಎಂದು ಕಿಡಿಕಾರಿದರು.
ಇಡೀ ಜಗತ್ತಿನ ಮುಸ್ಲಿಂ ಬಂಧುಗಳು ಒಬ್ಬ ಉಗ್ರಗಾಮಿಯನ್ನು ಹಿಡಿದುಕೊಟ್ಟಿಲ್ಲ. ಇದು ಬಹಳ ಬೇಸರದ ವಿಚಾರ. ಭಯೋತ್ಪಾದನೆಯನ್ನು ನಿರ್ನಾಮ ಮಾಡುವ ಕೆಲಸಕ್ಕೆ ಮುಸ್ಲಿಮರು ಸಹ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿಕೊಂಡರು.