ಬೆಂಗಳೂರು: ಜನನಿಬಿಡ ಪ್ರದೇಶದಲ್ಲಿ ಲಾಂಗ್ ಹಿಡಿದು ಹಲ್ಲೆ ಮಾಡಲಾಗಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಚಿಕ್ಕಬಿದರಕಲ್ಲು ಗ್ರಾಮದ ಆಟೋ ಸ್ಟಾಂಡ್ ನಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಗಂಗಮ್ಮ ಮತ್ತು ಗಡ್ಡಪ್ಪನನ್ನ ಹಿಂದಿನಿಂದ ಬಂದ ಮೂವರು ಲಾಂಗ್ ನಿಂದ ಮನಸ್ಸೋ ಇಚ್ಛೆ ಥಳಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಗಂಗಮ್ಮ ತನ್ನ ಗಂಡನನ್ನ ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದಳು. ಬಳಿಕ ಇತ್ತೀಚೆಗೆ ಗಂಗಮ್ಮ ಆಕೆಯ ಮೈದುನ ಚನ್ನಪ್ಪನಿಗೆ ಕರೆ ಮಾಡಿ, ನಾನೇ ನಿನ್ನ ಅಣ್ಣನನ್ನ ಕೊಲೆ ಮಾಡಿಸಿದ್ದು ಎಂದಿದ್ದಳು. ಅಲ್ಲದೆ ನಿನ್ನ ಕೈಯಲ್ಲಿ ಏನಾಗುತ್ತೆ ಎಂದು ಧಮ್ಕಿ ಕೂಡ ಹಾಕಿದ್ದಳಂತೆ. ಇದರಿಂದ ಕುಪಿತಗೊಂಡ ಚನ್ನಪ್ಪ ಹಾಗೂ ಗ್ಯಾಂಗ್‍ನಿಂದ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸದ್ಯ ಆರೋಪಿ ಚನ್ನಪ್ಪನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.