ಯುವಿಗೆ ಮಾಡಿದ ಅವಮಾನವಿದು: ಗಂಭೀರ್

Public TV
1 Min Read
YUVARAJ SINGH

ಮುಂಬೈ: ಟೀಂ ಇಂಡಿಯಾ ಅಲ್‍ರೌಂಡರ್ ಯುವರಾಜ್ ಸಿಂಗ್ ಅವರನ್ನು ಇಷ್ಟು ಕಡಿಮೆ ಬೆಲೆಗೆ ಐಪಿಎಲ್ ಟೂರ್ನಿಯಲ್ಲಿ ಖರೀದಿ ಮಾಡಿದ್ದು ಫ್ರಾಂಚೈಸಿಗಳು ಅವರಿಗೆ ಮಾಡಿದ ಅವಮಾನ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಸಂದರ್ಶನವೊಂದಲ್ಲಿ ಈ ಕುರಿತು ಮಾತನಾಡಿದ ಅವರು, ಜೈಪುರದಲ್ಲಿ ನಡೆದ ಹರಾಜು ಪ್ರಕ್ರಿಯೆ ವೇಳೆ ಯುವಿ ಅವರಿಗೆ ಮತ್ತಷ್ಟು ಬೆಲೆ ನೀಡಬಹುದಿತ್ತು. ಆ ಹಣಕ್ಕೆ ಅವರು ಅರ್ಹರಾಗಿದ್ದಾರೆ ಎಂದು ತಿಳಿಸಿದ್ದರು.

gautam gambhir

ಹಲವು ದಿನಗಳಿಂದ ಬ್ಯಾಟಿಂಗ್ ಫಾರ್ಮ್ ಹಾಗೂ ಫಿಟ್ನೆಸ್ ಕಾಯ್ದುಕೊಳ್ಳು ಶ್ರಮವಹಿಸುತ್ತಿದ್ದ ಯುವರಾಜ್ ಸಿಂಗ್ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಬಳಿಸಿಕೊಂಡ ಯುವಿ ಅರ್ಧ ಶತಕವನ್ನು ಸಿಡಿಸಿದ್ದರು. ಆದರೆ ಮುಂಬೈ ತಂಡ ಆಡುವ 11ರ ಬಳಗದಿಂದ ಯುವಿ ಅವರನ್ನ ಕೈಬಿಟ್ಟು ಇಶಾನ್ ಕಿಶಾನ್‍ಗೆ ಅವಕಾಶ ನೀಡಿದೆ. ಯುವಿ ಟೂರ್ನಿಯಲ್ಲಿ ಇದುವರೆಗೂ 4 ಪಂದ್ಯಗಳಲ್ಲಿ ಆಡಿದ್ದು, ಅರ್ಧ ಶತಕ ಸಮೇತ 138ರ ಸ್ಟ್ರೈಕ್ ರೇಟ್ ನಲ್ಲಿ 98 ರನ್ ಸಿಡಿಸಿದ್ದಾರೆ.

ಸದ್ಯ ಮುಂಬೈ ಇಂಡಿಯನ್ಸ್ 10 ಪಂದ್ಯಗಳಿಂದ 12 ಅಂಕಗಳಿಸಿ 2ನೇ ಸ್ಥಾನದಲ್ಲಿದ್ದು, ಚೆನ್ನೈ ಮೊದಲ ಸ್ಥಾನದಲ್ಲಿದೆ. ಏ.26 ರಂದು ಚೆನ್ನೈ ತಂಡವನ್ನು ರೋಹಿತ್ ಬಳಗ ಎದುರಿಸಲಿದೆ.

ಯುವರಾಜ್‍ಗೆ ಟೂರ್ನಿಯ ಮುಂದಿನ ಹಂತದಲ್ಲಿ ಹೆಚ್ಚಿನ ಅವಕಾಶ ನೀಡುವ ಬಗ್ಗೆ ನನಗೆ ವಿಶ್ವಾಸ ಇದೆ. ಮುಂಬೈ ಉತ್ತಮ ಆಟಗಾರರನ್ನ ಹೊಂದಿದ್ದು, ತಂಡದಲ್ಲಿ ಯುವಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದಹಾಗೇ 2017 ರಲ್ಲಿ ಯುವರಾಜ್ ಸಿಂಗ್ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಆಡಿದ್ದರು. 2019ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲೂ ಯುವಿ ಅವರನ್ನು ಮೊದಲ ರೌಂಡ್‍ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿ ಮಾಡಿರಲಿಲ್ಲ. 3ನೇ ರೌಂಡ್‍ನಲ್ಲಿ ಮುಂಬೈ ಯುವಿ ಮೂಲ ಬೆಲೆ 1 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *