ಮಂಡ್ಯ: ಉದ್ಘಾಟನೆಗೆ ಸಿದ್ಧಗೊಂಡಿದ್ದ ಕುಡಿಯುವ ನೀರು ಟ್ಯಾಂಕಿನ ಪೈಪನ್ನು ಕಿಡಿಗೇಡಿಗಳು ಕತ್ತರಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ 1ನೇ ವಾರ್ಡಿನಲ್ಲಿ ಕುಡಿಯುವ ನೀರು ಟ್ಯಾಂಕಿನ ಪೈಪ್ ಕೊಯ್ದಿದ್ದಾರೆ. ಇದರಿಂದ ರಾತ್ರಿಯಿಡಿ ಟ್ಯಾಂಕ್ ಸುತ್ತಮುತ್ತ ನೀರು ತುಂಬಿ ತುಳುಕುವ ಮೂಲಕ ನೀರು ಪೋಲಾಗಿದೆ.
ದೊಡ್ಡ ಟ್ಯಾಂಕ್ ನಿರ್ಮಿಸಿ ಮನೆ ಮನೆ ಬಾಗಿಲಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದ್ರೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗದಂತೆ ಇದೀಗ ಕಿಡಿಗೇಡಿಗಳು ಈ ಟ್ಯಾಂಕಿನ ಪೈಪ್ ಕತ್ತರಿಸಿದ್ದಾರೆ.
ಉದ್ಘಾಟನೆಗೆ ಸಿದ್ಧವಾಗಿದ್ದ ನೀರಿನ ಟ್ಯಾಂಕ್ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಉದ್ಘಾಟನೆಯಾಗಿರಲಿಲ್ಲ. ಪುರಸಭೆ ಅಧಿಕಾರಿಗಳು ಕುಡಿಯುವ ನೀರಿಗಾಗಿ ಸ್ಥಳೀಯರ ಮನವಿ ಮೇರೆಗೆ ಮಾನವೀಯತೆ ದೃಷ್ಟಿಯಿಂದ ನೀರು ಸರಬರಾಜು ಮಾಡುತ್ತಿದ್ದರು. ಆದ್ರೆ ಇದೀಗ ರಾಜಕೀಯ ವೈಷಮ್ಯದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆಂದು ಶಾಸಕ ಸುರೇಶ್‍ಗೌಡ ಬೆಂಬಲಿಗರು ಆರೋಪಿಸುತ್ತಿದ್ದಾರೆ.