ಬೆಂಗಳೂರು: ಮೊದಲು ನಾವು ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಬೇಕು. ನಂತರ ಬೇರೆಯವರನ್ನು ಪ್ರಶ್ನೆ ಮಾಡಬೇಕು ಎಂದು ನಟ ಯಶ್ ವೋಟ್ ಮಾಡಿದ ಬಳಿಕ ತಿಳಿಸಿದ್ದಾರೆ.
ಹೊಸಕೆರೆಹಳ್ಳಿಯಲ್ಲಿ ಮಾತನಾಡಿದ ಯಶ್, ಮತದಾನ ಬಹಳ ಮುಖ್ಯ ಆಗುತ್ತದೆ. ಯಾಕೆಂದರೆ ನಾವು ಯಾರನ್ನೇ ಪ್ರಶ್ನೆ ಮಾಡುವುದಕ್ಕೂ, ಕರ್ತವ್ಯ ಸರಿಯಾಗಿ ಮಾಡುತ್ತಿಲ್ಲ ಎಂದು ಕೇಳುವುದಕ್ಕೂ ಮೊದಲು ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ಮಾಡಿರಬೇಕು. ನಮ್ಮ ಕರ್ತವ್ಯವೇ ಮತದಾನ ಮಾಡುವುದು. ನಾನೇ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡದೇ ಇನ್ನೊಬ್ಬರ ಕಡೆ ಬೆರಳು ತೋರಿಸುವುದು ಸರಿಯಿಲ್ಲ. ದಯವಿಟ್ಟು ಎಲ್ಲರೂ ಹೋಗಿ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.
https://www.instagram.com/p/BwZKttQH3Nc/
ಕೆಲವರು ಯಾರಿಗೆ ವೋಟ್ ಮಾಡುವುದು, ನಮಗೆ ಯಾರು ಇಷ್ಟವಾಗಿಲ್ಲ ಎಂದು ಹೇಳುತ್ತಾರೆ. ಆದರೆ ಮೊದಲು ವೋಟು ಮಾಡಿ. ನಂತರ ಅವರು ಕೈಯಲ್ಲಿ ಕೆಲಸ ಮಾಡುವ ರೀತಿ ಮಾಡಿಸಬೇಕು. ಯಾರು ಕೆಲಸ ಮಾಡಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಈ ವ್ಯವಸ್ಥೆಯಲ್ಲಿ ನಾವು ಜವಾಬ್ದಾರಿ ತೆಗೆದುಕೊಂಡಾಗಲೇ ವ್ಯವಸ್ಥೆಯಲ್ಲಿ ಒಂದು ಜವಾಬ್ದಾರಿ ಬರುತ್ತದೆ. ಹೀಗಾಗಿ ಮೊದಲು ನಾವು ತೆಗೆದುಕೊಂಡು ನಮ್ಮ ಕೆಲಸವನ್ನು ಮಾಡೋಣ ಎಂದರು.
ಎಲ್ಲರಿಗೂ ತಮ್ಮ ಕರ್ತವ್ಯ ಏನು ಎಂಬ ಬಗ್ಗೆ ಜಾಗೃತಿ ಚೆನ್ನಾಗಿ ಆಗಿದೆ. ಆದ್ದರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದಷ್ಟು ಬೇಗ ಬಂದು ಮತದಾನ ಮಾಡಿ ಮತದಾರರ ಸಂಖ್ಯೆ ಹೆಚ್ಚಾಗಬೇಕು ಎಂದು ಯಶ್ ಮನವಿ ಮಾಡಿಕೊಂಡರು.